Karkala:  ಪುರಸಭೆ, ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಭೇಟಿ, ಕಡತಗಳ ಪರಿಶೀಲನೆ

Karkala: ಪುರಸಭೆ, ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಭೇಟಿ, ಕಡತಗಳ ಪರಿಶೀಲನೆ


ಕಾರ್ಕಳ ಪುರಸಭೆ ಹಾಗೂ ತಾಲೂಕು ಕಚೇರಿಗಳಿಗೆ ಜುಲೈ 18ರಂದು  ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು. ಪುರಸಭೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದು, ಈ ದೂರುಗಳ ಆಧಾರದ ಮೇಲೆ ಉಡುಪಿ ಪ್ರಭಾರ ಡಿವೈಎಸ್ಪಿ ಮಂಜು ನಾಥ್ ನೇತೃತ್ವದಲ್ಲಿ ಪುರಸಭೆ ಕಚೇರಿಯ ಎಲ್ಲ ವಿಭಾಗಗಳ ಕಡತಗಳನ್ನು ಕೂಲಂಕುಷ ಪರಿಶೀಲನೆ ನಡೆಸಲಾಯಿತು. ಈ ವೇಳೆ ವಿವಿಧ ಬಿಲ್, ಖಾತೆ ತಿದ್ದುಪಡಿ, ಖಾತಾ ವರ್ಗಾವಣೆ, ಜನನ-ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಗಿ ಹಾಗೂ ಇತರೆ ಅರ್ಜಿಗಳ ವಿಲೇವಾರಿ ವಿಳಂಬ ಆಗಿರುವುದು ಕಂಡುಬ0ದಿದೆ.ಪುರಸಭೆ ಕಚೇರಿ ಮಾತ್ರವಲ್ಲದೆ, ತಾಲೂಕು ಕಚೇರಿಯ ರೆಕಾರ್ಡ್ ರೂಂಗಳಿಗೂ ಲೋಕಾಯುಕ್ತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ, ಕಳೆದ 10 ತಿಂಗಳಿ0ದ ಬಾಕಿ ಉಳಿದಿದ್ದ ಪ್ರಮುಖ ಕಡತ ಪತ್ತೆಯಾಗಿದೆ. ಕಡತ ವಿಳಂಬಕ್ಕೆ ಸಿಬಂದಿಯಿ0ದ ಕಾರಣ ಕೇಳಿದ್ದು. ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ತಾಕೀತು ಮಾಡಿದರು. ಸಿಬ್ಬಂದಿಗಳ ಕರ್ತವ್ಯ ವಿಳಂಬ, ಕಚೇರಿಯಲ್ಲಿನ ನೂನ್ಯತೆ ಬಗ್ಗೆ ವರದಿ ಸಲ್ಲಿಸಲಾಗುವುದು. ಈ ಕುರಿತು ಲೋಕಾಯುಕ್ತದಿಂದ ಸಂಬ0ಧಪಟ್ಟ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಭಾರ ಡಿವೈಎಸ್ಪಿ ಮಂಜುನಾಥ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article