
Mangalore: ದಾಂಧಲೆ ಎಬ್ಬಿಸುತ್ತಿದ್ದ ಕಪಿರಾಯ ಕೊನೆಗೂ ಅಂದರ್
15/07/2025 07:42 AM
ಕಳೆದ ಒಂದು ತಿಂಗಳಿನಿ0ದ ಗುರುಪುರ ಬಳಿಯ ತೆಂಕ ಎಡಪದವು ಪರಿಸರದಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಕೋತಿಯೊಂದನ್ನು ಅರಣ್ಯ ಇಲಾಎ ಸಿಬ್ಬಂದಿಗಳುಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮರ್ನಾಲ್ಕು ತಿಂಗಳುಗಳಿ0ದ ಕುಂಡೋಡಿ ಪರಿಸರದಲ್ಲಿ ಕೋತಿ ಓಡಾಡುತ್ತಿತ್ತು. ಎರಡು ದಿನಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಯುವತಿಯೊಬ್ಬಳಿಗೆ ಕಚ್ಚಿತ್ತು.
ಇದರಿಂದ ಆತಂಕಗೊ0ಡಿದ್ದ ಪರಿಸರದ ಜನ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನ್ ಇರಿಸಿ, ಕೋತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.