Udupi: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ಪ್ರಚಾರ:ಕಾಂಗ್ರೆಸ್‌ನಿ0ದ ಧರಣಿ
18/07/2025 05:57 PM
ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯು ಮಾಡುತ್ತಿರುವ ಸುಳ್ಳು ಆರೋಪ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಉಡುಪಿ ಬೊಮ್ಮರಬೆಟ್ಟು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಝಿ ಸಚಿವ ವಿನಯಕುಮಾರ್ ಸೊರಕೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಪೂಜಾರಿ,ನಿಯಾಜ್ ಪಡುಬಿದ್ರಿ,ಜಯಂತ್ ರಾವ್,ಭಾಸ್ಕರ್ ಪೂಜಾರಿ,ಶಶಿಧರ್ ಜತನ್ನ, ಮಾಲತಿ ಆಚಾರ್ಯ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.