Byndoor: ಶಿರೂರು ಎಲ್‌ಸಿ ಗೇಟ್ ನಂ. 71 ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
06/08/2025
ಬೈಂದೂರು ತಾಲೂಕಿನ ಶಿರೂರು ಗ್ರಾಮದ ಎಲ್‌ಸಿ ಗೇಟ್ ನಂ. 71ರ ರಸ್ತೆ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇಲ್ಲಿ ಪ್ರತೀದಿನ 40-50 ರೈಲುಗಳು ಸಂಚರಿಸುವ ಸಮಯದಲ್ಲಿ ಗೇಟ್ ಮುಚ್ಚುವುದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗುವಂತೆ ಬದಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಎಲ್‌ಸಿ ಗೇಟ್ ನಂ. 71ರ ರಸ್ತೆಯ ಬದಲು ಎಲ್ಲಾ ವಾಹನಗಳು ಶಿರೂರು ಟೋಲ್‌ಗೇಟ್‌ನಿಂದ ಸುಮಾರು 500 ಮೀಟರ್ ಹಿಂದಕ್ಕೆ ಸಂಚರಿಸಿ, ಪಶ್ಚಿಮ ದಿಕ್ಕಿನಲ್ಲಿ ರೈಲ್ವೇ ಇಲಾಖೆಯಿಂದ ಹೊಸದಾಗಿ ನಿರ್ಮಾಣ ಆಗಿರುವ ರಸ್ತೆ ಮೂಲಕ ಸಂಚರಿಸಬೇಕೆAದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ಆದೇಶದಲ್ಲಿ ತಿಳಿಸಿದ್ದಾರೆ.