ಡಿ.21; ಕಿನ್ನಿಗೋಳಿ, ಬಜ್ಪೆ ಪ. ಪಂಚಾಯತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
Monday, December 08, 2025
ಡಿ.21ರಂದು ನಡೆಯಲಿರುವ ಕಿನ್ನಿಗೋಳಿ ಹಾಗೂ ಬಜಪೆ ಪಟ್ಟಣ ಪಂಚಾಯತ್ ಚುನಾವಣೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಮೊದಲ ಪಟ್ಟಿಯಲ್ಲಿ 18 ವಾರ್ಡ್ ಗಳನ್ನು ಹೊಂದಿರುವ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ 13 ವಾರ್ಡ್ ಗಳ ಅಭ್ಯರ್ಥಿಗಳು ಹಾಗೂ ಬಜಪೆ ಪಟ್ಟಣಪಂಚಾಯತ್ ನ 19 ವಾರ್ಡ್ ಗಳ ಪೈಕಿ 15 ವಾರ್ಡ್ ಗಳಿಗೆ ಅಧಿಕೃತ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆದೇಶಿಸಿದ್ದಾರೆ.
ಈ ಎರಡೂ ಪಂಚಾಯತ್‌ಗಳು ಕಳೆದ ಐದೂವರೆ ವರ್ಷಗಳಿಂದ ಅಧಿಕಾರಿಗಳ ಆಡಳಿತದಲ್ಲಿದ್ದವು. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಪ್ರಥಮ ಬಾರಿಗೆ ಡಿ. 21ರಂದು ಚುನಾವಣೆ ನಡೆಯಲಿದೆ.
