ವಿಮಾನ ಯಾನ ರದ್ದು: 610 ಕೋಟಿ ರೂ. ಪಾವತಿಸಿದ ಇಂಡಿಗೋ
Monday, December 08, 2025
ಇಂಡಿಗೋ ವಿಮಾನ ಸಂಸ್ಥೆಯು ತನ್ನ ರದ್ದುಗೊಂಡ ವಿಮಾನ ಯಾನಗಳ ಪ್ರಯಾಣಿಕರಿಗೆ ಸರ್ಕಾರದ ಆದೇಶದಂತೆ ಈವರೆಗೆ 610 ಕೋಟಿ ರೂಪಾಯಿಗಳನ್ನು ಮರು ಪಾವತಿಸಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರ 1ಸಾವಿರ ವಿಮಾನ ರದ್ದುಗೊಂಡಿದ್ದು, ಶನಿವಾರ 800 ವಿಮಾನ ರದ್ದಾಗಿದ್ದವು. ಸೋಮವಾರ 10 ಗಂಟೆ ವೇಳೆಗೆ 300 ವಿಮಾನಗಳು ರದ್ದುಗೊಂಡಿರುವ ಬಗ್ಗೆ ವರದಿಯಾಗಿವೆ.
ಏಜೆಂಟರುಗಳ ಮೂಲಕ ವಿಮಾನ ಟಿಕೆಟ್ ಖರೀದಿಸಿದವರು ಮತ್ತೆ ಏಜೆಂಟರುಗಳ ಮೂಲಕವೇ ಟಿಕೆಟ್ ಮರು ಪಾವತಿಗೆ ಅರ್ಜಿ ಸಲ್ಲಿಸಬೇಕು. ನಗದು ಹಣ ಪಾವತಿಸಿದವರಿಗೆ ಏರ್ ಪೋರ್ಟ್ ಟಿಕೆಟ್ ಕೌಂಟರ್‌ಗಳಿಗೇ ಹೋಗಿ ಟಿಕೆಟ್ ಹಾಗೂ ಗುರುತಿನ ಚೀಟಿ ನೀಡಿ ಮರು ಪಾವತಿ ಪಡೆದುಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.