ಗೋವಾ ನೈಟ್ ಕ್ಲಬ್ ದುರಂತ; ಮೂವರು ಅಧಿಕಾರಿಗಳ ಅಮಾನತು
Monday, December 08, 2025
ಗೋವಾದ ನೈಟ್ ಕ್ಲಬ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಮಂದಿ ಸಾವನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ.
ದುರಂತ ನಡೆದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್ 2023ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಗೆ ಅನುಮತಿ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕ್ಲಬ್ ಆರಂಭವಾಗುವಾಗ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಶಾರ್ ಹರ್ಲಾಂಖರ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಡಾ. ಶಮಿಲಾ ಮೋಂತೆರೊ ಹಾಗೂ ಅರ್ಪೊರಾ–ನಗೋವಾ ಗ್ರಾಮ ಪಂಚಾಯತ್‌ನ ಮಾಜಿ ಕಾರ್ಯದರ್ಶಿ ರಘುವೀರ್ ಭಗ್‌ಕರ್ ಅಮಾನತುಗೊಂಡವರು.
ನೈಟ್ ಕ್ಲಬ್‌ಗೆ ವ್ಯಾಪಾರ ಪರವಾನಗಿ ನೀಡಿದ ಅರ್ಪೊರಾ–ನಗೋವಾ ಪಂಚಾಯತ್‌ನ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಶನಿವಾರ ರಾತ್ರಿ ನಡೆದ ಭಾರಿ ಅಗ್ನಿ ದುರಂತದಿಂದಾಗಿ ಐವರು ಪ್ರವಾಸಿಗರು ಹಾಗೂ 20 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದರು.