ಮದುವೆ ಆಮಂತ್ರಣ ನೀಡಲು ಹೋದ ಯುವಕ ನಾಪತ್ತೆ; ದೂರು ದಾಖಲು
Tuesday, December 09, 2025
ಮಂಗಳೂರಿನ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಕ್ಷಣ್ ಜೆ.ಕೆ (32) ಎಂಬವರು ಡಿ.6 ರಂದು ತನ್ನ ತಾಯಿಯ ಕಾರಿನಲ್ಲಿ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದಾರೆ. ಮನೆ ಬಿಟ್ಟು ತೆರಳುವ ವೇಳೆ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುವುದಾಗಿ ಹೇಳಿ ಹೋಗಿದ್ದಾರೆ. ಡಿ.6 ರಂದು ರಾತ್ರಿ 10:30 ಕ್ಕೆ ಮಂಗಳೂರು ನಗರದ ಟೌನ್ ಹಾಲ್ ಬಳಿ ಕಾರು ಪತ್ತೆಯಾಗಿದೆ.
ಕಾಣೆಯಾಗಿರುವವರ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.