ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲಾ ವಾರ್ಷಿಕ ಕ್ರೀಡಾಕೂಟ
Tuesday, December 02, 2025
ಉಡುಪಿಯ ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವವನ್ನು ನಿವೃತ್ತ ಡಿವೈಎಸ್ಪಿ, ದೇಹದಾರ್ಢ್ಯ ಪಟು ವೆಲೆಂಟೈನ್ ಡಿಸೋಜಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇಶವನ್ನು ಸೂಪರ್ ಪವರ್ ಮಾಡುವಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು. ದುಶ್ಚಟಗಳಿಂದ ದೂರ ಉಳಿದರೆ ಸಾಧನೆ ಮೆರೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ಮಾತನಾಡಿ, ಎಷ್ಟು ವೇಗವಾಗಿ ಓಡುತ್ತೇವೆ ಎನ್ನುವುದು ಮುಖ್ಯವಲ್ಲ. ಎಷ್ಟು ದೂರ ಹಾರುತ್ತೇವೆ ಎನ್ನುವುದು ಮುಖ್ಯವಲ್ಲ. ವೇಗವಾಗಿ ಓಡಿದರೆ, ದೂರಕ್ಕೆ ಹಾರಿದರೆ ಬಹುಮಾನ ಗೆಲ್ಲಬಹುದು. ಆದರೆ ಕ್ರೀಡಾ ಸ್ಪೂರ್ತಿ, ಟೀಮ್ ಬಿಲ್ಡಿಂಗ್, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡರೆ ಬದುಕಿನಲ್ಲಿ ಚಾಂಪಿಯನ್ ಆಗಿ ಮೆರೆಯಲು ಸಹಕಾರಿಯಾಗಲಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣ ಸುದರ್ಶನ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರಾಂಶುಪಾಲೆ ರೂಪಾ ಡಿ. ಕಿಣಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಶಿಕ್ಷಕಿ ಮಂಜುಳಾ ವಂದಿಸಿದರು. ಸುಹಾಸಿನಿ ನಾರಾಯಣ್ ಎಂ. ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶರತ್ ಹೆಚ್.ಎಸ್ ಹಾಗೂ ವಿಂದ್ಯಾ ರಾವ್ ಕ್ರೀಡಾ ಕೂಟ ನಡೆಸಿಕೊಟ್ಟರು. ಶಾಲಾ ಮಕ್ಕಳಿಂದ ಕ್ರೀಡಾ ಕವಾಯತು, ತಾಲೀಮು ನಡೆದವು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗಾಗಿ ರಿಲೇ, ಹರ್ಡಲ್ಸ್, ಉದ್ದ ಜಿಗಿತ, ಲಿಂಬೆ ಚಮಚ ಓಟ ಇತ್ಯಾದಿ ಹಮ್ಮಿಕೊಳ್ಳಲಾಗಿತ್ತು.
.jpeg)

.jpeg)
.jpeg)
.jpeg)

