ಕಂದಕಕ್ಕೆ ಉರುಳಿದ ಶಬರಿಮಲೆ ಯಾತ್ರಾರ್ಥಿಗಳ ಬಸ್; ಓರ್ವ ಸಾವು, ಹಲವರಿಗೆ ಗಾಯ
Monday, December 08, 2025
ಶಬರಿಮಲೆ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್ಸು ಕಂದಕಕ್ಕೆ ಉರುಳಿ ಬಿದ್ದು, ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಕಾಸರಗೋಡಿನ ಚಿತ್ತರಿಕ್ಕಾಲ್ ಸಮೀಪ ನಡೆದಿದೆ.
ಮೃತರನ್ನು ಮೈಸೂರಿನ ಹರೀಶ್ ಎಂದು ಗುರುತಿಸಲಾಗಿದೆ.
ಮೈಸೂರಿನಿಂದ ಈ ಬಸ್ಸು ಶಬರಿಮಲೆಗೆ ತೆರಳುತ್ತಿದ್ದು, ರಸ್ತೆಯಿಂದ 30 ಅಡಿ ಯಷ್ಟು ಆಳಕ್ಕೆ ಉರುಳಿ ಬಿದ್ದಿದೆ. ಗಾಯಾಳುಗಳನ್ನು ನಾಗರಿಕರು ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸಿನಲ್ಲಿ 50 ಜನ ಯಾತ್ರಾರ್ಥಿಗಳು ಇದ್ದರು ಎಂದು ತಿಳಿದು ಬಂದಿದೆ.