ದ.ಕ. ಜಿಲ್ಲೆಯ ತಾಲೂಕು ಪತ್ರಕರ್ತರ ಸಂಘದ ಚುನಾವಣೆ: ಚುನಾವಣಾಧಿಕಾರಿಯಾಗಿ ಆರೀಫ್
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಂಬಂಧಪಟ್ಟ ತಾಲೂಕು ಪತ್ರಕರ್ತರ ಸಂಘಗಳ ಚುನಾವಣೆಗೆ ರಾಜ್ಯ ಸಂಘವು ಈಗಾಗಲೇ ನಿರ್ದೇಶನ ನೀಡಿದೆ. ಈ ಹಿನ್ನಲೆಯಲ್ಲಿ ಮುಖ್ಯ ಚುನಾವಣಾಕಾರಿಯಾಗಿ ಹಿರಿಯ ಪತ್ರಕರ್ತ ಮುಹಮ್ಮದ್ ಆರೀಫ್ ಅವರನ್ನು ನೇಮಕ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಪೂರ್ವಸಿದ್ಧತೆಗಳ ಬಗ್ಗೆ ಚರ್ಚಿಸಿ, ಚುನಾವಣಾಧಿಕಾರಿ, ಸಹಚುನಾವಣಾಧಿಕಾರಿಗಳ ನೇಮಕ ಮಾಡಲಾಗಿದೆ. ಇದು ಮಾತ್ರವಲ್ಲದೆ ನಾನಾ ತಾಲೂಕುಗಳಲ್ಲಿ ಚುನಾವಣೆ ನಿರ್ವಹಿಸಲು ಆಯಾಯ ತಾಲೂಕುಗಳಿಗೆ ಚುನಾವಣಾಧಿಕಾರಿಗಳ ನೇಮಕ ಮಾಡಲಾಯಿತು. ಈ ಸಂದರ್ಭ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಳ್ಳಾಲ: ಸತೀಶ್ ಇರಾ (ಚುನಾವಣಾಧಿಕಾರಿ) ಅಶೋಕ್ ಶೆಟ್ಟಿ (ಸಹಚುನಾವಣಾಧಿಕಾರಿ), ಮೂಡುಬಿದಿರೆ: ರಾಜೇಶ್ ಶೆಟ್ಟಿ (ಚುನಾವಣಾಧಿಕಾರಿ), ಕಿರಣ್ ಶಿರ್ಸಿಕರ್ (ಸಹಚುನಾವಣಾಧಿಕಾರಿ) ಮೂಲ್ಕಿ: ಸಂದೇಶ್ (ಚುನಾವಣಾಧಿಕಾರಿ), ಸಂದೀಪ್ (ಸಹ ಚುನಾವಣಾಧಿಕಾರಿ), ಬಂಟ್ವಾಳ: ಸುರೇಶ ಡಿ ಪಳ್ಳಿ (ಚುನಾವಣಾಧಿಕಾರಿ), ಜಯಶ್ರೀ (ಸಹ ಚುನಾವಣಾಧಿಕಾರಿ), ಪುತ್ತೂರು: ವಿಜಯ್ ಕೋಟ್ಯಾನ್ ಪಡು (ಚುನಾವಣಾಧಿಕಾರಿ), ವಿಲ್ರೆಡ್ ಡಿಸೋಜ (ಸಹಚುನಾವಣಾಧಿಕಾರಿ), ಬೆಳ್ತಂಗಡಿ: ದಿವಾಕರ್ ಪದ್ಮುಂಜ (ಚುನಾವಣಾಧಿಕಾರಿ) ಅಭಿಷೇಕ್ (ಸಹಚುನಾವಣಾಧಿಕಾರಿ), ಕಡಬ: ಲಕ್ಷ್ಮೀನಾರಾಯಣ (ಚುನಾವಣಾಧಿಕಾರಿ), ಸಂದೀಪ್ ವಾಗ್ಲೆ (ಸಹ ಚುನಾವಣಾಧಿಕಾರಿ), ಸುಳ್ಯ: ಹರೀಶ್ ಮೊಟುಕಾನ (ಚುನಾವಣಾಧಿಕಾರಿ), ಸಂದೀಪ್ ವಾಗ್ಲೆ (ಸಹಚುನಾವಣಾಧಿಕಾರಿ) ನೇಮಕ ಮಾಡಲಾಗಿದೆ.
ಡಿಸೆಂಬರ್ ತಿಂಗಳಾಂತ್ಯದೊಳಗೆ ಎಲ್ಲ ತಾಲೂಕು ಸಂಘಗಳ ಚುನಾವಣೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.