ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆಗೆ ನಟ ಮಾಸ್ಟರ್ ಆನಂದ್ ಭೇಟಿ
Thursday, December 04, 2025
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ, ನಿರ್ದೇಶಕ, ನಿರೂಪಕ, ಯೂಟ್ಯೂಬರ್ ಹಾಗೂ ರೇಡಿಯೊ ಜಾಕಿ ಮಾಸ್ಟರ್ ಆನಂದ್ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಗೆ ಸೌಜನ್ಯದ ಭೇಟಿ ನೀಡಿದರು. ಖ್ಯಾತ ಗಾಯಕ ನಾರಾಯಣ ಶರಳಾಯ ಜೊತೆಗಿದ್ದರು.
ತನ್ನ masteranand ಹೆಸರಿನ ಧರ್ಮ, ಆಧ್ಯಾತ್ಮ, ಸಾತ್ವಿಕತೆ ಪಸರಿಸುವ ಯೂಟ್ಯೂಬ್ ಚಾನೆಲ್ ಗಾಗಿ ಕೊಲ್ಲೂರಿನಲ್ಲಿ ಚಿತ್ರೀಕರಣ ಮುಗಿಸಿ ಅವರು ಉಡುಪಿಗೆ ಬಂದಿದ್ದರು. ಶಾಂತಿನಿಕೇತನ ಶಾಲೆಯ ಸಂಚಾಲಕ ಅಲೆವೂರು ದಿನೇಶ್ ಕಿಣಿ, ಮುಖ್ಯೋಪಾಧ್ಯಾಯರಾದ ರೂಪಾ ಡಿ. ಕಿಣಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಿಕ್ಷಕ-ಶಿಕ್ಷಕಿಯರು, ಶಾಲಾ ಸಿಬ್ಬಂದಿ ವರ್ಗದವರ ಕೋರಿಕೆ ಮೇರೆಗೆ ಗ್ರೂಪ್ ಫೊಟೊ ಹಾಗೂ ಸೆಲ್ಫಿಗೆ ಫೋಸ್ ನೀಡಿದರು.
ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬ ಆಚರಿಸುತ್ತಿರುವ ನಾರಾಯಣ ಶರಳಾಯ ಹಾಗೂ ಶಿಕ್ಷಕಿ ಸುಹಾಸಿನಿ ನಾರಾಯಣ ಶರಳಾಯ ದಂಪತಿಗಳಿಗೆ ಮಾಸ್ಟರ್ ಆನಂದ್ ಶುಭ ಹಾರೈಸಿದರು.



