ಬಿಳಿಯೂರಿನಲ್ಲಿ ನೇತ್ರಾವತಿಗೆ ಅಣೆಕಟ್ಟು; ಉದ್ಭವಲಿಂಗ ಮುಳುಗಡೆ
Tuesday, December 09, 2025
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ನದಿಗೆ ಬಿಳಿಯೂರಿನಲ್ಲಿ ನಿರ್ಮಿಸಿರುವ ಅಣೆಕಟ್ಟಿಗೆ ಗೇಟ್ ಅಳವಡಿಸಲಾಗಿದ್ದು, ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರ ಸಂಗಮದಲ್ಲಿ ಉದ್ಭವ ಲಿಂಗ ಜಲಾವೃತ್ತಗೊಂಡಿದೆ. ಹೀಗಾಗಿ ಈ ಬಾರಿಯ ಮಖೆ ಜಾತ್ರೆಗೆ ಸಂಕಷ್ಟ ಎದುರಾಗಿದೆ.
ಬಿಳಿಯೂರು ಅಣೆಕಟ್ಟಿನಲ್ಲಿ ಸಂಪರ್ಕ ಸೇತುವೆ ಸಹಿತ ಅಣೆಕಟ್ಟು ನಿರ್ಮಿಸಿ 4 ಮೀಟರ್ ಎತ್ತರದ ಗೇಟು ಅಳವಡಿಸಿದಾಗ ಅಣೆಕಟ್ಟಿನ ಹಿನ್ನೀರು ಉಪ್ಪಿನಂಗಡಿ ಗ್ರಾಮದ ಉದಕ್ಕೂ ನದಿಯಲ್ಲಿ ಸಂಗ್ರಹಗೊಂಡಿತ್ತು. ಅಣೆಕಟ್ಟು ನಿರ್ಮಿಸಿದಾಗ ಅದರ ಹಿನ್ನೀರು ನೆಕ್ಕಿಲಾಡಿವರೆಗೆ ಮಾತ್ರ ಸಂಗ್ರಹವಾಗಲಿದೆ ಎಂದು ತಿಳಿಸಲಾಗಿತ್ತು.ಈ ಯೋಜನ ಕಾರ್ಯರೂಪಕ್ಕೆ ಬಂದ ಬಳಿಕ ಉಪಪಿನಂಗಡಿ ಗ್ರಾಮ ವ್ಯಾಪ್ತಿಯ ನದಿ ಒಡಲನ್ನು ಆವರಿಸಿದೆ.
ನದಿಯಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಪಾರಂಪರಿಕವಾಗಿ ನಡೆಯುತ್ತಿದ್ದ ಶಿವರಾತ್ರಿ ಮಖೆ ಜಾತ್ರೆ ಸಹಿತ ಮೂರು ಮಖೆ ಜಾತ್ರೆ ಸಂದರ್ಭದಲ್ಲಿ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆ ಕೃಷಿಕರ ಮೊಗದಲ್ಲಿ ಸಂತಸ ತಂದಿರುವುದು ಒಂದೆಡೆಯಾದರೆ ಧಾರ್ಮಿಕ ಆಚರಣೆಗಳಿಗೂ ಇದರಿಂದ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.