-->
ಎ. 25: ಮಲ್ಪೆ ಕಡಲ ಕಿನಾರೆಯಲ್ಲಿ "ಆಳ್ವಾಸ್ ರೀಚ್-2026" ರಾಷ್ಟ್ರೀಯ ಸಮಾವೇಶ

ಎ. 25: ಮಲ್ಪೆ ಕಡಲ ಕಿನಾರೆಯಲ್ಲಿ "ಆಳ್ವಾಸ್ ರೀಚ್-2026" ರಾಷ್ಟ್ರೀಯ ಸಮಾವೇಶ


ಮೂಡುಬಿದಿರೆ  ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗವು 'ಟೀಂ ಈಶ್ವರ ಮಲ್ಪೆ' ತಂಡದ ಸಹಯೋಗ ಹಾಗು ಸಮಾಜಕಾರ್ಯ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಏ. 25ರಂದು ಮಲ್ಪೆಯ ಕಡಲ ಕಿನಾರೆಯಲ್ಲಿ "ಆಳ್ವಾಸ್ ರೀಚ್-2026" ಎಂಬ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಯೋಜಕರಾದ ಶ್ರೀ ಕೃಷ್ಣಮೂರ್ತಿ ಬಿ ತಿಳಿಸಿದ್ದಾರೆ. 


ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. "ಸೋಶಿಯಲ್ ವರ್ಕ್ ಫಾರ್ ಆಡ್ರೆಸಿಂಗ್ ಯೂತ್ ಎಟ್ ರಿಸ್ಕ್" (ಅಪಾಯದಲ್ಲಿರುವ ಯುವಜನತೆಯ ಸಮಸ್ಯೆಗೆ ಸ್ಪಂದಿಸುವಲ್ಲಿ ಸಮಾಜಕಾರ್ಯ) ಅನ್ನುವ ವಸ್ತು ವಿಷಯದೊಂದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಪೂರ್ವಭಾವಿಯಾಗಿ ಸಮಾಜಕಾರ್ಯ ವಿಭಾಗವು ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ಪ್ರಯುಕ್ತ 'ಟೀಂ ಈಶ್ವರ ಮಲ್ಪೆ' ತಂಡದ ಮುಖ್ಯಸ್ಥರಾದ ಕರ್ನಾಟಕದ "ಅಕ್ವಾ ಮ್ಯಾನ್" (ಜಲದಲ್ಲಿ ಜನಜೀವ ರಕ್ಷಕ) ಎಂದು ಖ್ಯಾತರಾದ ಈಶ್ವರ ಮಲ್ಪೆ ಅವರನ್ನು ರಾಯಭಾರಿಯನ್ನಾಗಿಸಿ ನೇಮಿಸಿದೆ.  "ಯೂತ್ ಎಟ್ ರಿಸ್ಕ್: ಬಿ ಸೇಫ್ ಸೇವ್ ಲೈಫ್" (ಅಪಾಯದಲ್ಲಿ ಯವಜನತೆ: ಜಾಗರೂಕರಾಗಿರಿ ಮತ್ತು ಜೀವ ಉಳಿಸಿ) ಎಂಬ ಧೈಯವಾಕ್ಯದೊಂದಿಗೆ ದಕ್ಷಿಣಕನ್ನಡ ಹಾಗು ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ನಡೆಸಿದ ಜಾಗೃತಿ ಅಭಿಯಾನದ ಸಮಾಪನ ಮತ್ತು "ಸೋಶಿಯಲ್ ವರ್ಕ್ ಫಾರ್ ಅಡ್ರೆಸಿಂಗ್ ಯೂತ್ ಎಟ್ ರಿಸ್ಕ್" ಎಂಬ ವಸ್ತುವಿಷಯದೊಂದಿಗೆ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿ, ಜಾಗೃತಿ ಜಾಥಾ, ಸಾಧಕರಿಗೆ ಸನ್ಮಾನ ಹಾಗು ಸಮಾರೋಪ ಸಮಾರಂಭದೊಂದಿಗೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಜರುಗಲಿವೆ.

ಈ ಸಮಾವೇಶದ ಉದ್ಘಾಟನೆಯನ್ನು ಬೆಳಗ್ಗೆ 10:30ಕ್ಕೆ ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಸಲಿದ್ದು,  ನಂತರ ವಸ್ತುವಿಷಯಾಧಾರಿತ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿ, ಹಳೆ ವಿದ್ಯಾರ್ಥಿಗಳ ಸಂಗಮದೊಂದಿಗೆ ಸಂಜೆ ಗಂಟೆ 4 ರಿಂದ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿದೆ. ಇದು ಮನೆಯ ಮುಖ್ಯ ಬೀದಿಯಲ್ಲಿ ಸಾಗಿ ಕಡಲ ಕಿನಾರೆಗೆ ತಲುಪಿ ಗಾಂಧಿ ಸ್ಮಾರಕ ಪುತ್ಥಳಿಯ ಸಮೀಪ ವಿಶೇಷವಾಗಿ ನಿರ್ಮಿಸಲ್ಪಟ್ಟ ತೆರೆದ ವೇದಿಕೆಯಲ್ಲಿ ವಸ್ತುವಿಷಯ ಕುರಿತ ಅರಿವು ಕಾರ್ಯಕ್ರಮ, ಸಂಜೆ ಗಂಟೆ 5 ರಿಂದ ಕಲರ್ಸ್ ಕನ್ನಡ ಖ್ಯಾತಿಯ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ ಕಲಾವತಿ ದಯಾನಂದ್ ನೇತೃತ್ವದ ಉಡುಪಿಯ ಕಲಾಸಿಂಧು ಸಂಗೀತ ಬಳಗದವರಿಂದ ಸುಗಮ ಸಂಗೀತ, ಸಂಜೆ ಗಂಟೆ 6:30 ರಿಂದ ನೂತನ ಆ್ಯಂಬುಲೆನ್ಸ್ ವಾಹನ ಸೇವೆಯ ಲೋಕಾರ್ಪಣೆ, ಸನ್ಮಾನ ಮತ್ತು ಸಮಾರೋಪಲ್ ಸಮಾರಂಭದ ಬಳಿಕ ಗೋಳಿಯಂಗಡಿಯ ಕಲಾಶ್ರೀ ನಾಟ್ಯಾಲಯದವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು. 

ಸಂಜೆ ಗಂಟೆ 4 ರಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿಗಳಾದ ಆನಂದ ಸಿ. ಕುಂದರ್, ಪ್ರಸಾದ್‌ ರಾಜ್ ಕಾಂಚನ್, ಉಡುಪಿಯ ಶಾಸಕರಾದ  ಯಶ್ಪಾಲ್ ಸುವರ್ಣ, ಮಾಜಿ ಶಾಸಕರಾದ  ರಘುಪತಿ ಭಟ್, ಉಡುಪಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ, ಮಲ್ಪೆ ವಾರ್ಡ್ ಕೌನ್ಸಿಲರ್  ಲಕ್ಷ್ಮೀ ಮಂಜುನಾಥ್, ಮಂಗಳೂರಿನ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ರಶ್ಮಿ ಹರಿಪ್ರಸಾದ್, ಮಲ್ಪೆ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಡಿ.. ಮಲ್ಪೆ ಎಡೆಂಚರ್ ಸ್ಪೋಟ್ಸ್ನ ಶಾನ್‌ ರಾಜ್, ಜಾಗೃತಿ ಅಭಿಯಾನದ ರಾಯಭಾರಿ ಈಶ್ವರ ಮಲ್ಪೆ, ಅಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್, ಆಡಳಿತಾಧಿಕಾರಿಗಳಾದ ಪ್ರೊ. ಬಾಲಕೃಷ್ಣ ಶೆಟ್ಟಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮಧುಮಾಲ ಕೆ., ಸಮಾವೇಶದ ಸಂಯೋಜಕರಾದ ಕೃಷ್ಣಮೂರ್ತಿ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಪತಿ ಭಟ್, ಪದಾಧಿಕಾರಿಗಳಾದ  ಸ್ಮಿತಾ ಬಿ.ಯಸ್., ಶ್ರೀ ಮುಕುಂದರಾಜ್, ಡಾ. ಶ್ರೀದೇವಿ ಕೆ. , ಸುಕೇಶ್ ಶೆಟ್ಟಿ, ಮಲ್ಪೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ವರ್ಗೀಸ್ ಪಿ., ಹಿರಿಯ ಅಧ್ಯಾಪಕರಾದ ಸತೀಶ್ ಭಟ್ ಮತ್ತು ದೇಶದ ವಿವಿಧ ಭಾಗದ ಆಹ್ವಾನಿತ ಗಣ್ಯರು, ಸಾಮಾಜಿಕ ಕಾರ್ಯಕರ್ತರು ಹಾಗು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. 

ಸುದ್ದಿಗೋಷ್ಟಿಯಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮಧುಮಾಲ ಕೆ ಹಾಗೂ ಜಾಗೃತಿ ಅಭಿಯಾನದ ರಾಯಭಾರಿ ಈಶ್ವರ ಮಲ್ಪೆ ಉಪಸ್ಥಿತರಿದ್ದರು. 

 

Ads on article

Advertise in articles 1

advertising articles 2

Advertise under the article