ಮಳೆಯಿಂದಾಗಿ ಕುಸಿದ ತಡೆಗೋಡೆ: 5 ಕಾರುಗಳು ಜಖಂ (Video)
Wednesday, April 22, 2026
ಬೆಳಿಗ್ಗೆ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರಿನ ಅತ್ತಾವರ ಸಮೀಪದ ಅಯ್ಯಪ್ಪ ಮಂದಿರದ ಮುಂಭಾಗ ತಡೆಗೋಡೆ ಕುಸಿದು ಬಿದ್ದು ಐದು ಕಾರುಗಳು ಜಖಂಗೊಂಡಿದೆ.
ಮಳೆಯ ಪರಿಣಾಮದಿಂದಾಗಿ ಏಕಾಏಕಿ ತಡೆಗೋಡೆ ಕುಸಿದುಬಿದ್ದ ಕಾರಣ ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.