-->
 ಕಾಸರಗೋಡು ‘ಗಡಿನಾಡು’ ಪತ್ರಿಕೆಯ ಕೆ. ಗಣೇಶ ನಿಧನ

ಕಾಸರಗೋಡು ‘ಗಡಿನಾಡು’ ಪತ್ರಿಕೆಯ ಕೆ. ಗಣೇಶ ನಿಧನ


ಕಳೆದ ದಶಕದ ಅಂತ್ಯದಲ್ಲಿ ಕಾಸರಗೋಡಿನಿಂದ ಪ್ರಕಟಗೊಳ್ಳುತ್ತಿದ್ದ ‘ಗಡಿನಾಡು’ ಸಂಜೆ ಪತ್ರಿಕೆಯ ಪ್ರಕಾಶಕ/ ಸಂಪಾದಕರಾಗಿದ್ದ ಕೆ. ಗಣೇಶ (68) ನಿಧನರಾಗಿದ್ದಾರೆ. 

ಇವರು ಕಾಸರಗೋಡು ಉಳಿಯತಡ್ಕ ಭಗವತಿ ನಗರ ನಿವಾಸಿಯಾಗಿದ್ದರು. 1985 - 90 ರ ಕಾಲಕ್ಕೆ ‘ಗಡಿನಾಡು” ಕಾಸರಗೋಡಿನ ಜನಪ್ರಿಯ ಪತ್ರಿಕೆಯಾಗಿತ್ತು. ತಾಲೂಕಿನಲ್ಲಿ 90 ರ ದಶಕದಲ್ಲಿ ನಾಲ್ಕು ಕನ್ನಡ ಪತ್ರಿಕೆಗಳು ಯಶಸ್ವಿಯಾಗಿ ಪ್ರಕಟವಾಗಲು “ಗಡಿನಾಡು” ಪ್ರೇರಣೆಯಾಗಿತ್ತು. ದಿ. ಕಿಟ್ಟು ಪೂಜಾರಿ - ಕೊರಪ್ಪಾಳು ದಂಪತಿಗಳ ಪುತ್ರನಾದ ಇವರು ಪತ್ನಿ ಮಾಲತಿ, ಮಕ್ಕಳಾದ ಕಿಶೋರ್, ಸ್ಮಿತ ಹಾಗೂ ಮೊಮ್ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನಗಲಿದ್ದಾರೆ.

Ads on article

Advertise in articles 1

advertising articles 2

Advertise under the article