ಅಂಪಾರು ಬರ್ಲಾಡಿಯ ಯುವತಿ ನಾಪತ್ತೆ: ದೂರು ದಾಖಲು
Friday, April 17, 2026
ಕುಂದಾಪುರ ತಾಲೂಕು ಅಂಪಾರು ಗ್ರಾಮದ ಬರ್ಲಾಡಿಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಬರ್ಲಾಡಿಯ ನಿವಾಸಿ ಜಯಶ್ರೀ (27) ಎಂಬ ಯುವತಿಯು ಏಪ್ರಿಲ್ 7 ರಿಂದ ನಾಪತ್ತೆಯಾಗಿದ್ದಾಳೆ. 5 a2 ಇಂಚು ಎತ್ತರ, ಸಪೂರ ಶರೀರ, ಕೋಲು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಪಿ.ಎಸ್ ದೂ.ಸಂಖ್ಯೆ: 08259-280299, ಸಿ.ಪಿ.ಐ ದೂ.ಸಂಖ್ಯೆ: 08254-230338, ಎಸ್.ಡಿ.ಪಿ.ಓ ದೂ.ಸಂಖ್ಯೆ: 08254-232338, ಡಿ.ಪಿ.ಓ ದೂ.ಸಂಖ್ಯೆ: 0820-2534777 ಹಾಗೂ ರೇಂಜ್ ದೂ.ಸಂಖ್ಯೆ: 8242220501 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.