ಪೆಟ್ರೋಲ್-ಡೀಸಲ್ ದರ ಮತ್ತೆ 0.94 ರೂ. ಏರಿಕೆ! ಕೇಂದ್ರದ ವಿರುದ್ಧ ಜನಾಕ್ರೋಶ
Saturday, May 23, 2026
ಕೇವಲ 10 ದಿನಗಳ ಅಂತರದಲ್ಲಿ 3ನೇ ಬಾರಿ ಮತ್ತೆ ಪೆಟ್ರೋಲ್ - ಡೀಸಲ್ ದರ ಏರಿಕೆಯಾಗಿದೆ. 10 ದಿನಗಳ ಹಿಂದಷ್ಟೇ ಲೀಟರಿಗೆ ತಲಾ 3 ರೂಪಾಯಿ ಏರಿಕೆ ಮಾಡಲಾಗಿತ್ಕು. ಬಳಿಕ ಮೇ 19ರಂದು ಮತ್ತೆ ತಲಾ 0.90 ರೂಪಾಯಿ ಏರಿಕೆ ಮಾಡಡಲಾಗಿತ್ತು. ಇದೀಗ ನಿನ್ನೆ ಮಧ್ಯರಾತ್ರಿ ತೈಲ ಕಂಪೆನಿಗಳು ಮತ್ತೆ ದರ ಏರಿಕೆ ಮಾಡಿ ಆದೇಶ ಹೊರಡಿಸಿವೆ.
ಪೆಟ್ರೋಲ್, ಡೀಸಲ್ ದರ ಲೀಟರಿಗೆ 0.94 ರೂ. ಏರಿಕೆ ಮಾಡಲಾಗಿದೆ.
ಉಡುಪಿಯಲ್ಲಿ ಪೆಟ್ರೋಲ್ ಇಂದಿನ ದರ 107.55, ನಿನ್ನೆ 106.61. ಡೀಸೆಲ್ ಇಂದಿನ ದರ 95.48, ನಿನ್ನೆ 94.54.