-->
 ಅಂತರ್‌ರಾಜ್ಯ ಮನೆ ಕಳ್ಳತನದ “TATTO - 313” ಗ್ಯಾಂಗ್‌ ನ ಇಬ್ಬರ ಬಂಧನ: ಮಣಿಪಾಲ ಪೊಲೀಸರ ಕಾರ್ಯಾಚರಣೆ

ಅಂತರ್‌ರಾಜ್ಯ ಮನೆ ಕಳ್ಳತನದ “TATTO - 313” ಗ್ಯಾಂಗ್‌ ನ ಇಬ್ಬರ ಬಂಧನ: ಮಣಿಪಾಲ ಪೊಲೀಸರ ಕಾರ್ಯಾಚರಣೆ


ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ಮನೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು  ಬೇಧಿಸಿರುವ ಮಣಿಪಾಲ ಪೊಲೀಸರು ಅಂತರ್‌ರಾಜ್ಯ ಮನೆ ಕಳ್ಳತನದ “TATTO - 313” ಗ್ಯಾಂಗ್‌ ನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ದರ್ಶನ್ ಆರ್ (21) ಹಾಗೂ ದಾವಣಗೆರೆಯ ಚಂದ್ರು (26) ಎಂದು ಗುರುತಿಸಲಾಗಿದೆ. ಇವರನ್ನು ಠಾಣೆಗೆ ಕರೆತಂದು ಪರಿಶೀಲಿಸಿದಾಗ ಮಣಿಪಾಲ ಠಾಣಾ ಪ್ರಕರಣ 15/2026ರ ಕಳ್ಳತನ ಪ್ರಕರಣದ ಆರೋಪಿಗಳೆಂದು ದೃಢಪಟ್ಟಿದೆ.

ಅಮಿತ ಡ್ಯಾನಿಯಲ್ ಅವರು ಫೆಬ್ರವರಿ 3ರಂದು ಮನೆಯ ಬಾಗಿಲು ಹಾಗೂ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಸುಮಾರು 75 ಗ್ರಾಂ ತೂಕದ, ಅಂದಾಜು ರೂ.7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ನಡೆದಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026ರಂತೆ ಪ್ರಕರಣ ದಾಖಲಿಸಲಾಗಿತ್ತು. 


ಪಿಎಸ್‌ಐ (ತನಿಖೆ) ಶಂಭುಲಿಂಗಯ್ಯ ಹಾಗೂ ಠಾಣಾ ಸಿಬ್ಬಂದಿ ರವಿರಾಜ್ ಮತ್ತು ಮಂಜುನಾಥ್ ಅವರು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋದಾಮು ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಅವರು ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದುದಾಗಿ ಹಾಗೂ ಅದೇ ಪ್ರದೇಶದಲ್ಲಿ ಮತ್ತೊಂದು ಕಳ್ಳತನಕ್ಕೆ ಸಿದ್ಧತೆ ನಡೆಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಿದಾ ಆರೋಪಿಗಳು ಶಿವಮೊಗ್ಗದ ಲಾಡ್ಜ್‌ನಲ್ಲಿ ಮರೆಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 7,90,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ 2 ಮೊಬೈಲ್ ಫೋನ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ತನಿಖೆಯಲ್ಲಿ ಆರೋಪಿಗಳು ತಮ್ಮ ಕೈಗಳ ಮೇಲೆ “TATTO 313” ಎಂಬ ಅಚ್ಚೆ ಹಾಕಿಸಿಕೊಂಡು “TATTO 313” ಗ್ಯಾಂಗ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳ್ಳತನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸಿ ಕಬ್ಬಿಣದ ಉಪಕರಣಗಳ ಸಹಾಯದಿಂದ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಈ ಗ್ಯಾಂಗ್ ವಿರುದ್ಧ ಈ ಹಿಂದೆಯೇ ವಿವಿಧ ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಳ್ಳತನದಲ್ಲೂ ಇವರ ಪಾತ್ರ ಇರುವುದಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲು ಬಾಕಿ ಇದ್ದು, ತನಿಖೆ ಮುಂದುವರಿದಿದೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ  ಹರಿರಾಂ ಶಂಕರ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್ಕ ಇವರ ಮಾರ್ಗದರ್ಶನದಂತೆ   ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪಕೆ.ಯು ನಿರ್ದೇಶನದಂತೆ ಮಣಿಪಾಲ ಠಾಣಾ ನಿರೀಕ್ಷಕ ಮಹೇಶ ಪ್ರಸಾದ್  ನೇತೃತ್ವದಲ್ಲಿ ನಡೆದ  ಕಾರ್ಯಾಚರಣೆಯಲ್ಲಿ ಪಿ.ಎಸ್. ಐ (ಕಾ&ಸು) ತಿಮ್ಮೇಶ್ ಬಿ.ಎನ್ , ಪಿ.ಎಸ್.ಐ (ತನಿಖೆ) ಶಂಭುಲಿಂಗಯ್ಯ ಎಂ  ಹಾಗೂ  ಮಣಿಪಾಲ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಎಸ್ ಐ ವಿವೇಕಾನಂದ,  ವಿಶ್ವಜಿತ್ ಬೆಳ್ಳೆ, ಮಹಮ್ಮದ್ ಅಜ್ವಲ್ ಹೈಕಾಡಿ, ಚೇತನ್,  ರವಿರಾಜ್,  ಮಂಜುನಾಥ ಎಮ್ ಆರ್, ಸಿದ್ದೇಶ್, ಠಾಣಾ ತನಿಖಾ ಸಹಾಯಕಯರಾದ ಹೆಚ್.ಸಿ ಸುಕುಮಾರ ಶೆಟ್ಟಿ ಸುರೇಶ ಶೆಟ್ಟಿ,   ಉಮೇಶ, ಲಕ್ಷ್ಮೀಶ, ಜೀಪು ಚಾಲಕರಾದ ಸಲೀಂ, ಸತೀಶ, ಹಾಗೂ ಉಡುಪಿ ಜಿಲ್ಲಾ ಸಿಡಿಆರ್ ವಿಭಾಗದ ದಿನೇಶ್ ಹಾಗೂ ನಿತೀನ್  ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article