-->
 ಮಲ್ಪೆ: ಗರ್ಭಿಣಿ ಹಾಗೂ ತಾಯಿ-ಮಕ್ಕಳ ಆರೋಗ್ಯ ಕುರಿತು ಅರಿವು ಕಾರ್ಯಕ್ರಮ

ಮಲ್ಪೆ: ಗರ್ಭಿಣಿ ಹಾಗೂ ತಾಯಿ-ಮಕ್ಕಳ ಆರೋಗ್ಯ ಕುರಿತು ಅರಿವು ಕಾರ್ಯಕ್ರಮ


ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರೋಟರಿ ಮಲ್ಪೆ ಕರಾವಳಿಯ  ಸಂಯುಕ್ತ ಆಶ್ರಯದಲ್ಲಿ ಗರ್ಭಿಣಿಯರು ಮತ್ತು ತಾಯಿ-ಮಕ್ಕಳ ಆರೋಗ್ಯ ಕುರಿತು  ಅರಿವು ಮೂಡಿಸುವ ಕಾರ್ಯಕ್ರಮವು  ಜುಲೈ 30 ರಂದು  ಮಲ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಗರ್ಭಿಣಿಯರ ಆರೈಕೆ, ಸುರಕ್ಷಿತ ಹೆರಿಗೆ, ನವಜಾತ ಶಿಶುಗಳ ಆರೋಗ್ಯ, ತಾಯಂದಿರ ಪೌಷ್ಟಿಕ ಆಹಾರ, ಲಸಿಕೆ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೇಷ್ಮ ಮಾಹಿತಿ ನೀಡಿದರು. 

ರೋಟರಿ ಮಲ್ಪೆ ಕರಾವಳಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಲ್ಪೆ ಕರಾವಳಿಯ ಜಿ. ಎಸ್. ಆರ್. ಎಮ್. ಮಹೇಶ್ ಕುಮಾರ್, ಕಾರ್ಯದರ್ಶಿ ಯಶೋದ ಕೇಶವ್, ಉಪಾಧ್ಯಕ್ಷರಾದ ಗಣೇಶ್ ಕುಂದರ್, ಕೋಶಾಧಿಕಾರಿ ಪ್ರಶಾಂತ್, ಸದಸ್ಯರಾದ ರಮೇಶ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಂಜುನಾಥ್ ಹಾಗೂ ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article