-->
ವಿಟ್ಲ ಪಿಂಡಿ ಪ್ರಯುಕ್ತ ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಮೂಡೆಹಾಲು ವಿತರಣೆ

ವಿಟ್ಲ ಪಿಂಡಿ ಪ್ರಯುಕ್ತ ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಮೂಡೆಹಾಲು ವಿತರಣೆ


ಉಡುಪಿ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತಾಲೂಕು ಆಫೀಸು ಶಾಸಕರ ಕಚೇರಿ ಬಳಿ ಸಾರ್ವಜನಿಕರಿಗೆ ಮೂಡೆ ಹಾಲು ವಿತರಿಸಲಾಯಿತು
.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಶಂಕರಪುರ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ, ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ದೇಶವಿದೇಶದಿಂದ ಬಹಳಷ್ಟು ಭಕ್ತರು ಉಡುಪಿಗೆ ಬರುತ್ತಾರೆ. ಅವರಿಗೆ ಶ್ರೀ ಕೃಷ್ಣ ಪ್ರಿಯವಾದ ಮೂಡೆ ಹಾಲು ಮತ್ತು ಅನ್ನಪ್ರಸಾದ ನೀಡುವ ಮೂಲಕ ಅಷ್ಟಮಿಯ ಹಬ್ಬವನ್ನು ಅವರೊಂದಿಗೆ ಆಚರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಉಡುಪಿ ಎಂದಾಗ ನಮಗೆ ನೆನಪು ಬರುವುದು ಶ್ರೀ ಕೃಷ್ಣ ಹೀಗಾಗಿ ಇಲ್ಲಿನ ಪರ್ಯಾಯ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅತ್ಯಂತ ಪ್ರಸಿದ್ಧವಾಗಿದೆ ಎಂದರು.


ಶ್ರೀ ಕ್ಷೇತ್ರ ಶಂಕರಪುರದಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅನೇಕ ರೀತಿಯ ಸಾಮಾಜಿಕ ಚಟುವಟಿಕೆಯನ್ನು ನಿತ್ಯ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸತೀಶ್ ದೇವಾಡಿಗ, ರೇಷ್ಮಾ ಸಂತೋಷ ಹೆಗ್ಡೆ, ವಾರಿಜ ಕಲ್ಮಾಡಿ, ಮಾಜಿ ನಗರ ಸಭಾ ಸದಸ್ಯ ವಿಜಯ್ ಕೊಡವೂರು, ಗಜೇಂದ್ರ ಬೈಂದೂರು, ನಾಗರಾಜ್, ಶ್ರೀಧರ್ ಅಮೀನ್, ರಾಜೇಶ್ ಇನ್ನಂಜೆ,ಶಿಲ್ಪ ಮಹೇಶ್ ಜತ್ತನ್, ಸಂತೋಷ್ ಕಕ್ಕುಂಜೆ ಕ್ಷೇತ್ರದ ಭಕ್ತರು ಮತ್ತು ಗುರೂಜಿಯವರ ಶಿಷ್ಯರು  ಉಪಸ್ಥಿತರಿದ್ದರು. ರಾಫವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

Ads on article

Advertise in articles 1

advertising articles 2

Advertise under the article