-->
ಲಯನ್ಸ್ ಕ್ಲಬ್ ಬ್ರಹ್ಮಾವರ ಉಜ್ವಲ್‌ಗೆ ಸನದು ಪ್ರದಾನ, ಪದಾಧಿಕಾರಿಗಳ ಪದಗ್ರಹಣ

ಲಯನ್ಸ್ ಕ್ಲಬ್ ಬ್ರಹ್ಮಾವರ ಉಜ್ವಲ್‌ಗೆ ಸನದು ಪ್ರದಾನ, ಪದಾಧಿಕಾರಿಗಳ ಪದಗ್ರಹಣ


ನೂತನವಾಗಿ ಸ್ಥಾಪನೆಯಾದ ಲಯನ್ಸ್ ಕ್ಲಬ್ ಬ್ರಹ್ಮಾವರ ಉಜ್ವಲ್‌ಗೆ ಸನದು ಪ್ರದಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬ್ರಹ್ಮಾವರದ ರಾಯಲ್ ಇನ್ ಸಭಾಭವನದಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು.


ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಅವರು ನೂತನ ಕ್ಲಬ್‌ಗೆ ಸನದನ್ನು ಹಸ್ತಾಂತರಿಸಿದರು. ನಿಕಟಪೂರ್ವ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಅವರು ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.



ಕ್ಲಬ್‌ನ ಅಧ್ಯಕ್ಷೆಯಾಗಿ ರೇನಿ ಅನಿತಾ ಡಿಸೋಜ, ಕಾರ್ಯದರ್ಶಿಯಾಗಿ ರೇಶೇಲ್ ಲೋಬೊ ಹಾಗೂ ಕೋಶಾಧಿಕಾರಿಯಾಗಿ ವಿಕ್ರಂ ಪೂಜಾರಿ ಅಧಿಕಾರ ಸ್ವೀಕರಿಸಿದರು.

ಮೊದಲ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಹಾಗೂ ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ. ರಮಾನಂದ ಅವರು ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೇರಕ ಕ್ಲಬ್ ಆಗಿರುವ ಲಯನ್ಸ್ ಕ್ಲಬ್ ಸಂತೆಕಟ್ಟೆಯ ಅಧ್ಯಕ್ಷ ಲಯನ್ ಎಡ್ವರ್ಡ್ ಲೋಬೊ ವಹಿಸಿದ್ದರು. ಇನ್ನೊಂದು ಪ್ರೇರಕ ಕ್ಲಬ್ ಆದ ಮಣಿಪಾಲ ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣ ಮುಖ್ಯೋಪಾಧ್ಯಾಯ ಅವರು ನೂತನ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಪ್ರಾಂತ್ಯಾಧ್ಯಕ್ಷ ಲೂಯಿಸ್ ಲೋಬೊ ಹಾಗೂ ವಲಯಾಧ್ಯಕ್ಷ ದಿನೇಶ್ ಕಿಣಿ ಅವರು ಶುಭಾಶಯ ಭಾಷಣ ಮಾಡಿದರು. ನೂತನ ಕ್ಲಬ್ ಸ್ಥಾಪನೆಗೆ ಪ್ರೇರಕರಾದ ಸುದರ್ಶನ್ ನಾಯಕ್ ಹಾಗೂ ಡಾ. ಗಣೇಶ್ ಪೈ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಡಾ. ಗಣೇಶ್ ಪೈ ಕಾರ್ಯಕ್ರಮವನ್ನು ನಿರೂಪಿಸಿದರು

Ads on article

Advertise in articles 1

advertising articles 2

Advertise under the article