-->
 ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ ಹಿರಿಯಡ್ಕ ವೃತ್ತ ಮಟ್ಟದ ಅಂತರ್ ಶಾಲಾ ಕಬ್ಬಡಿ ಪಂದ್ಯಾಟ

ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ ಹಿರಿಯಡ್ಕ ವೃತ್ತ ಮಟ್ಟದ ಅಂತರ್ ಶಾಲಾ ಕಬ್ಬಡಿ ಪಂದ್ಯಾಟ


ಉಡುಪಿಯ ಹಿರಿಯಡ್ಕ ವೃತ್ತ ಮಟ್ಟದ 14 ಮತ್ತು 17 ವಯೋಮಾನದ ಅಂತರ್ ಶಾಲಾ ಬಾಲಕ-ಬಾಲಕಿಯರ ಕಬ್ಬಡಿ ಕ್ರೀಡಾಕೂಟ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.


ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಹಾಗೂ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಬ್ಬಡಿ ಪಂದ್ಯಾಟವನ್ನು ಶಾಂತಿನಿಕೇತನ ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಕ್ತಿ ಮತ್ತು ಯುಕ್ತಿಯೊಂದಿಗೆ ಶಿಸ್ತು ಹಾಗೂ ಸಂಯಮದಿಂದ ಆಡುವ ಕಬ್ಬಡಿ ಕ್ರೀಡೆಯು ಜೀವನದ ಮಹತ್ವದ ಪಾಠಗಳನ್ನು ಕಲಿಸುತ್ತದೆ. ಗೆಲುವು ಮುಖ್ಯವಾದರೂ, ಕ್ರೀಡಾ ಸ್ಫೂರ್ತಿಯಿಂದ ಆಟವಾಡುವುದು ಅದಕ್ಕಿಂತಲೂ ಮುಖ್ಯ ಎಂದು ಹೇಳಿದರು.


ಉಡುಪಿ ತಾಲೂಕು ಕ್ರೀಡಾಧಿಕಾರಿ ರವೀಂದ್ರ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್ ಒನ್ ಎಸೋಸಿಯೇಶನ್ ಅಧ್ಯಕ್ಷ ವರದರಾಜ್ ನಾಯ್ಕ್, ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಮೇಶ್ ಕುದಿ, ಶಾಂತಿನಿಕೇತನ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯಿನಿ ಸುಮನಾ ಬಿ.ಆರ್., ದೈಹಿಕ ಶಿಕ್ಷಣ ಶಿಕ್ಷಕ ಶರತ್ ಎಚ್.ಎಸ್. ಮತ್ತಿತರರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಸ್ವಾಗತಿಸಿದರು. ಶಿಕ್ಷಕ ಅನೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಅಭಿಶೇಕ್ ಶೆಟ್ಟಿ ವಂದಿಸಿದರು.

Ads on article

Advertise in articles 1

advertising articles 2

Advertise under the article