ಅಸಹಾಯಕ ವೃದ್ಧೆಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ
Monday, September 07, 2026
ಜೀವನ ನಿರ್ವಹಣೆಗೆ ಅಸಹಾಯಕ ಸ್ಥಿತಿಯಲ್ಲಿ ದಿನದೂಡುತ್ತಿದ್ದ ವೃದ್ಧೆಯೊಬ್ಬರಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮಾನವೀಯ ನೆರವು ನೀಡಿ, ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಿದ್ದಾರೆ.
ಮೂಡುಬೆಳ್ಳೆ ಪರಿಸರದಲ್ಲಿ ವಾಸವಾಗಿದ್ದ ರತ್ನ ಮೂಲ್ಯ (70) ಅವರು ಈ ಹಿಂದೆ ಮೀನು ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಜೀವನ ನಿರ್ವಹಣೆಗೆ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಅವರ ದಯನೀಯ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದಿದ್ದರು.
ನಿತ್ಯಾನಂದ ಒಳಕಾಡು ಅವರು ಸ್ಥಳೀಯರ ಸಹಕಾರದೊಂದಿಗೆ ವೃದ್ಧೆಗೆ ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ರತ್ನ ಮೂಲ್ಯ ಅವರಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ದಿಕ್ಕಿಲ್ಲದ ವೃದ್ಧೆಗೆ ಆಶ್ರಯ ನೀಡುವ ಮೂಲಕ ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ್ ಅವರು ಮಾನವೀಯತೆ ಮೆರೆದಿದ್ದಾರೆ.
ಈ ಕಾರ್ಯಾಚರಣೆಗೆ ಜಾಸ್ಮಿನ್, ರವಿರಾಜ್ ಮೂಡುಬೆಳ್ಳೆ ಹಾಗೂ ಉದ್ಯಮಿ ವಿನ್ಸಂಟ್ ಫರ್ನಾಂಡಿಸ್ ಅವರು ಸಹಕಾರ ನೀಡಿದರು.