ಉಪ್ಪೂರು ಗ್ರಾಮದಲ್ಲಿ 1.05 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ
ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 1.05 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳ ರಸ್ತೆ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗಿದೆ. ಅಮ್ಮುಂಜೆ ಸಂದೀಪ್ ಅವರ ಮನೆಯ ಬಳಿಯಿಂದ ಉದಯ ಪೂಜಾರಿ ಅವರ ಮನೆಯವರೆಗಿನ ರಸ್ತೆ ಕಾಮಗಾರಿಗೆ 25 ಲಕ್ಷ, ಉಗ್ಗೇಲ್‌ಬೆಟ್ಟು ಸುಮತಿ ಅವರ ಮನೆಯಿಂದ ಸದಾಶಿವ ಬಂಗೇರ ಅವರ ಮನೆಯವರೆಗೆ 25 ಲಕ್ಷ, ಮೂಡು ಅಮ್ಮುಂಜೆ ದಿನೇಶ್ ಶೆಟ್ಟಿ ಅವರ ಮನೆಯಿಂದ ಕೃಷ್ಣ ಪೂಜಾರಿ ಅವರ ಮನೆಯವರೆಗೆ 25 ಲಕ್ಷ, ಅಮ್ಮುಂಜೆ ಬೇಬಿ ಅವರ ಮನೆಯಿಂದ ಗಿರಿಜಾ ಬಂಗೇರ ಅವರ ಮನೆಯವರೆಗೆ 20 ಲಕ್ಷ ಹಾಗೂ ಉಗ್ಗೇಲ್‌ಬೆಟ್ಟು ಪಿಳ್ಕಳ ಶೇಖರ್ ಪೂಜಾರಿ ಅವರ ಮನೆಯಿಂದ ಮಡಿವಾಳರಬೆಟ್ಟು ವರೆಗಿನ ರಸ್ತೆ ಕಾಮಗಾರಿಗೆ 10 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಉಪ್ಪೂರು ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಈ ರಸ್ತೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ್ ಕೋಟ್ಯಾನ್, ರಾಜು ಪೂಜಾರಿ, ಸತೀಶ್ ಪೂಜಾರಿ, ಸುರೇಶ್ ಪೂಜಾರಿ, ಹೆರಿಯ, ಅಶ್ವಿನ್ ರೋಚ್, ಪ್ರಭಾಕರ, ಬೇಬಿ, ಶಾರದಾ, ಮಮತಾ, ಅಮ್ಮಣಿ, ವಸಂತಿ, ಆಶಾ, ಸಂಗೀತಾ, ಸುಜಾತ, ರಾಘವೇಂದ್ರ ಉಪ್ಪೂರು, ಕಿಟ್ಟ ಪೂಜಾರಿ, ಕೇಶವ ಪೂಜಾರಿ, ಪ್ರವೀಣ್ ಪೂಜಾರಿ, ರಾಜೀವಿ ಮೊದಲಾದವರು ಉಪಸ್ಥಿತರಿದ್ದರು.