ನ.16ರಿಂದ 24ರವರೆಗೆ ಅಂಚೆ ಜೀವ ವಿಮೆ ವ್ಯವಹಾರ ಸ್ಥಗಿತ
Saturday, November 14, 2026
ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಸೇವೆಗಳ ತಂತ್ರಾಂಶವನ್ನು ಹಳೆಯ ವ್ಯವಸ್ಥೆಯಿಂದ ಹೊಸ ತಂತ್ರಾಂಶಕ್ಕೆ ಬದಲಾಯಿಸುವ ಹಿನ್ನೆಲೆಯಲ್ಲಿ ನವೆಂಬರ್ 16ರಿಂದ 24ರವರೆಗೆ ಅಂಚೆ ಕಚೇರಿಗಳಲ್ಲಿ ಜೀವ ವಿಮೆಗೆ ಸಂಬಂಧಿಸಿದ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ.
ನವೆಂಬರ್ 25ರಿಂದ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಾಗಲಿವೆ.
ಈ ಅವಧಿಯಲ್ಲಿ ಗ್ರಾಹಕರು ಸಹಕರಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.