2027ರ ಸಾಲಿನ 'ಶಾರದಾಕೃಷ್ಣ' ಪ್ರಶಸ್ತಿಗೆ ಮುರಳಿ ಕಡೆಕಾರ್ ಆಯ್ಕೆ
Wednesday, November 18, 2026
ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡುವ 'ಶಾರದಾಕೃಷ್ಣ’ ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಸಂಘಟಕ, ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಆಯ್ಕೆಯಾಗಿದ್ದಾರೆ.
ಜ. 23ರಂದು ಸಂಜೆ 5 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ 50 ಸಾವಿರ ಗೌರವಧನ ಒಳಗೊಂಡಿದೆ