-->
ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಡಾನ್ ರವಿ ಪೂಜಾರಿಗೆ ಅನುಮತಿ; ಇಂದು ರಾತ್ರಿಯೇ ಉಡುಪಿಗೆ

ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಡಾನ್ ರವಿ ಪೂಜಾರಿಗೆ ಅನುಮತಿ; ಇಂದು ರಾತ್ರಿಯೇ ಉಡುಪಿಗೆ


ಬೆಂಗಳೂರು ಜೈಲಿನಲ್ಲಿರುವ ಮಾಜಿ ಡಾನ್ ರವಿ ಪೂಜಾರಿ ಅವರ ತಾಯಿ ಸುಶೀಲ ಪೂಜಾರ್ತಿ (86) ಅವರು ನಿನ್ನೆ (ನ. 12) ರಾತ್ರಿ ನಿಧನರಾಗಿದ್ದು, ಮೃತರ ಅಂತ್ಯಕ್ರಿಯೆ ಶನಿವಾರ ಪೂರ್ವಾಹ್ನ 11 ಗಂಟೆಗೆ ಅವರ ಹಿರಿಯ ಮನೆ ಮಲ್ಪೆಯ ನೆರ್ಗಿಯಲ್ಲಿ ನಡೆಯಲಿದೆ. 

                              ರವಿ ಪೂಜಾರಿ
 ರವಿ ಪೂಜಾರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ರವಿ ಪೂಜಾರಿ ಬೆಂಗಳೂರು ನ್ಯಾಯಾಲಯದಲ್ಲಿ ಅನುಮತಿ ಕೋರಿದ್ದು, ಆ ಪ್ರಕಾರ ನ್ಯಾಯಾಲಯವು 24 ಗಂಟೆಗಳ ಕಾಲ ಅನುಮತಿ ನೀಡಿದೆ. 

ಶುಕ್ರವಾರ ಅಪರಾಹ್ನ ಬೆಂಗಳೂರಿನಲ್ಲಿ ಹೊರಟು ಶನಿವಾರ ತಾಯಿಯ ಅಂತಿಮ ದರ್ಶನ ಪಡೆದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತಕ್ಷಣ ವಾಪಾಸು ಕರೆತರುವಂತೆ ನ್ಯಾಯಾಲಯ ಸೂಚಿಸಿದೆ. ಬೆಂಗಳೂರಿನ ಸಶಸ್ತ್ರ ಮೀಸಲು ಪೊಲೀಸರು ಎಸ್ಕಾರ್ಟ್ ನೀಡುವಂತೆ ಸೂಚಿಸಲಾಗಿದ್ದು, ಖರ್ಚು ವೆಚ್ಚಗಳನ್ನು ರವಿ ಪೂಜಾರಿ ಅವರೇ ಭರಿಸುವಂತೆ ಸೂಚಿಸಲಾಗಿದೆ. ಉಡುಪಿ ಎಸ್.ಪಿ. ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. 

ಸುಶೀಲಾ ಪೂಜಾರ್ತಿ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ಅವರಿಗೆ  ಐದು ಮಕ್ಕಳು, ಅದರಲ್ಲಿ  ಇಬ್ಬರು ಪುತ್ರಿಯರು, ರವಿ ಪೂಜಾರಿ ಸೇರಿದಂತೆ ಮೂವರು ಪುತ್ರರಿದ್ದಾರೆ.

Ads on article

Advertise in articles 1

advertising articles 2

Advertise under the article