Ahmedabad:ವಿಮಾನ ದುರಂತಕ್ಕೆ ಕಾರಣ ಬಹಿರಂಗ

Ahmedabad:ವಿಮಾನ ದುರಂತಕ್ಕೆ ಕಾರಣ ಬಹಿರಂಗ


270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ಅಹಮದಾಬಾದ್ ವಿಮಾನ ದುರಂತದ ಕಾರಣ ಕೊನೆಗೂ ಬಯಲಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಿದ್ದ ವಿಮಾನ ಅಪಘಾತಗಳ ತನಿಖಾ ಸಂಸ್ಥೆಯ ವರದಿ ಜುಲೈ 12ರಂದು ಬಿಡುಗಡೆಯಾಗಿದೆ. ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತಿದೆ. ಅದರ ಸ್ವಿಚ್‌ಗಳು ರನ್‌ನಿಂದ ಕಟ್ ಆಫ್ ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ, ವಿಮಾನ ಮೇಲೆಕ್ಕೆ ಹಾರಲು ಸಾಧ್ಯವಾಗಿಲ್ಲ ಎಂದು ತನಿಖಾ ವರದಿಯಲ್ಲಿ ಎಎಐಬಿ ತಿಳಿಸಿದೆ.


ಪೈಲಟ್‌ಗಳ ಮಾತುಕತೆ ರೆಕಾರ್ಡ್
: ವಿಮಾನ ದುರಂತಕ್ಕೀಡಾಗುವ ಮೊದಲ ಪೈಲಟ್‌ಗಳಿಬ್ಬರು ಮಾತನಾಡಿಕೊಂಡಿದ್ದು, ಬ್ಲ್ಯಾಕ್ ಬಾಕ್ಸ್ನಲ್ಲಿ ದಾಖಲಾಗಿದೆ. ಒಬ್ಬ ಪೈಲಟ್ ಇಂಧನವನ್ನು ಏಕೆ ಆಫ್ ಮಾಡಿದ್ದೀರಿ' ಎಂದು ಕೇಳುತ್ತಾರೆ. ಅದಕ್ಕೆ ಇನ್ನೊಬ್ಬ ಪೈಲಟ್ 'ನಾನು ಮಾಡಿಲ್ಲ' ಎಂದು ಹೇಳುತ್ತಾರೆ. ಇಂಧನ ಸ್ವಿಚ್‌ಗಳನ್ನು ಮರುಚಾಲನೆ ಮಾಡಿದರೂ, ಅವು ಸಕ್ರಿಯವಾಗಿಲ್ಲ ಎಂದು ತನಿಖಾ ವರದಿ ಹೇಳಿದೆ.ವಿಮಾನ ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಭೀಕರವಾಗಿ ದುರಂತಕ್ಕೀಡಾಯಿತು. ಅಪಘಾತ ಸ್ಥಳದಲ್ಲಿ ಇಂಧನದ ಮಾದರಿಯನ್ನು ಸಂಗ್ರಹಿಸಿ ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಅದರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ  ಎಂದು ಎಎಐಬಿ ಮಾಹಿತಿ ನೀಡಿದೆ.



 


 

Ads on article

Advertise in articles 1

advertising articles 2

Advertise under the article