
Udupi: "ಮನೆ ಮನೆಗೆ ಪೊಲೀಸ್" ಕಾರ್ಯಕ್ರಮಕ್ಕೆ ಚಾಲನೆ
11/07/2025 04:34 AM
ಜನರ ಸಮಸ್ಯೆ, ಸಲಹೆ ಹಾಗೂ ದೂರುಗಳನ್ನು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಮನೆ ಬಾಗಿಲಿಗೆ ಭೇಟಿ ನೀಡುವ ವಿನೂತನ ಪರಿಕಲ್ಪನೆ "ಮನೆ ಮನೆಗೆ ಪೊಲೀಸ್" ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜಾರಿಗೊಳಿಸಿದೆ. ಜುಲೈ11 ರಂದು ಉಡುಪಿಯ ಅಜ್ಜರಕಾಡುವಿನ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನಿವಾಸದಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಸಿದ್ದಪ್ಪ ಗಂಗಣ್ಣವರ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ರು. ಬಳಿಕ ವಿವಿಧ ಕಡೆ ಮನೆ ಮನೆಗೆ ತೆರಳಿ ದಿನನಿತ್ಯ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೊಲೀಸರ ಜೊತೆಗೆ ನಾಗರಿಕರ ಸಹಕಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಪ್ರಭು ಡಿ.ಟಿ ಅವರು, ಇತ್ತೀಚೆಗೆ ಮಾದಕ ವ್ಯಸನ, ಸೈಬರ್ ಕ್ರೆöÊಂ ಹೆಚ್ಚಾಗುತ್ತಿದ್ದು, ಪೊಲೀಸರೊಂದಿಗೆ ಜನರ ಸಹಕಾರವಿದ್ದರೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.