
Mangalore: ಕಂಪೌ0ಡ್ ಕುಸಿದು 16 ಬೈಕ್, ಇನ್ನೋವಾ ಕಾರಿಗೆ ಹಾನಿ
17/07/2025 09:58 AM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕಾಂಪೌ0ಡ್ ಕುಸಿದು ಬಿದ್ದು 16 ಬೈಕ್ ಹಾಗೂ ಒಂದು ಇನ್ನೋವಾ ಕಾರಿಗೆ ಹಾನಿಯಾದ ಘಟನೆ ಮಂಗಳೂರಿನ ಮೆರಿಹಿಲ್ ಬಳಿ ಇರುವ ಕೆನರಾ ವಿಕಾಸ್ ಕಾಲೇಜಿನ ಬಳಿ ನಡೆದಿದೆ.
ಬ್ರಾಮರಿ ಆಟೋ ವರ್ಕ್ಸ್ ಗ್ಯಾರೇಜ್ ಗೆ ರಿಪೇರಿಗೆ ಬಂದಿರುವ ದ್ವಿಚಕ್ರವಾಹನಗಳನ್ನು ಕಂಪೌ0ಡ್ ಬದಿಯಲ್ಲಿ ನಿಲ್ಲಿಸಲಾಗಿದ್ದು, ಸುಮಾರು 10 ಅಡಿ ಎತ್ತರದ ಕಂಪೌ0ಡ್ ಬಿದ್ದ ಕಾರಣ ಸುಮಾರು 16ಕ್ಕೂ ಅಧಿಕ ವಾಹನಗಳು ಜಖಂಗೊ0ಡಿದೆ. ದ್ವಿಚಕ್ರ ವಾಹನಗಳ ಜೊತೆ ಒಂದು ಇನ್ನೊವಾ ಕಾರು ಕೂಡ ಜಖಂಗೊ0ಡಿದೆ ಎಂದು ತಿಳಿದು ಬಂದಿದೆ.