
Mysore: ರಜತಗಿರಿ ಪ್ಯಾಲೇಸ್‌ನಲ್ಲಿ ಹಲಸಿನ ಖಾದ್ಯಗಳ ಮೇಳ
14/07/2025 06:12 AM
ರಜತಗಿರಿ ಪ್ಯಾಲೇಸ್ ಈ ಬಾರಿಯ ಹಲಸಿನ ಖಾದ್ಯಗಳ ಮೇಳವನ್ನು ಇದೇ ಜುಲೈ 14ರಿಂದ20 ತನಕ ಆಯೋಜಿಸಿದೆ. ಹಲಸಿನ ಹಲವು ಖಾದ್ಯಗಳ ಈ ಮೇಳ ಕಳೆದ ಬಾರಿ ಅತ್ಯಂತ ಮೆಚ್ಚುಗೆ ಪಡೆದಿದ್ದು ಈ ಬಾರಿಯೂ ಹಲಸು ಪ್ರಿಯರನ್ನು ಸೆಳೆಯಲಿದೆ. ರಜತಗಿರಿಯ ಮೈಸೂರು ರಸ್ತೆ ಮತ್ತು ಕನಕಪುರ ರಸ್ತೆಯ ಬ್ರಾಂಚ್ ಗಳಲ್ಲಿ ಆಯೋಜಿಸಲಾಗಿದೆ. ಬಾಳೆ ಎಲೆ ಊಟ ಮಧ್ಯಾನ್ಹ ಮಾತ್ರ. ಉಳಿದ ವಿಶೇಷ ಖಾದ್ಯಗಳು ದಿನವಿಡೀ ಲಭ್ಯವಿರಲಿದೆ. ಅತೀ ಕಡಿಮೆ ದರದಲ್ಲಿ ಹಲಸಿನ ಹಣ್ಣಿನ ಖಾದ್ಯಗಳಾದ ದೋಸೆ, ಹಲಸಿನ ಹಣ್ಣಿನ ಇಡ್ಲಿ, ಮುಳಕ, ಚಿಲ್ಲಿ, ಹಲಸಿನ ಹಣ್ಣಿನ ಕಬಾಬ್ ಮುಂತಾದ ಖಾದ್ಯಗಳನ್ನು ಸವಿಯಬಹುದಾಗಿದೆ.