
NewDelhi: 7 ವರ್ಷ ತುಂಬಿದ ಮಕ್ಕಳ ಆಧಾರ್ ಗೆ ಬಯೋಮೆಟ್ರಿಕ್ ನವೀಕರಣ ಕಡ್ಡಾಯ
16/07/2025 07:08 AM
ಮಕ್ಕಳಿಗೆ 5 ವರ್ಷ ತುಂಬುವುದಕ್ಕೆ ಮೊದಲೇ ಆಧಾರ್ ಕಾರ್ಡ್ ಮಾಡಿಸಿ, 7 ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ನವೀಕರಣ ಮಾಡಿಸದೇ ಇದ್ದರೆ ಆಧಾರ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಡ್ಡಾಯ ಮೆಟ್ರಿಕ್ ನವೀಕರಣಕ್ಕೆ ಸಂಬ0ಧಿಸಿದ0ತೆ ಈಗಾಗಲ ಆಧಾರ್ ಸಂಸ್ಥೆ ಮೊಬೈಲ್‌ಗಳಿಗೆ ಸಂದೇಶ ಕಳುಹಿಸುತ್ತಿದೆ ಎಂದು ತಿಳಿಸಿದೆ. 5 ವರ್ಷಕ್ಕಿಂತ ಚಿಕ್ಕ ಮಕ್ಕಳ ಆಧಾರ್ ನೋಂದಣಿಗೆ ಛಾಯಾಚಿತ್ರ, ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸದಂತಹ ವಿವರಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ, ಬೆರಳಚ್ಚು ಮತ್ತು ಐರಿಸ್ ಗುರುತುಗಳನ್ನು ತೆಗೆದುಕೊಳ್ಳುವುದಿಲ್ಲ.