Udupi:ಪೊಲೀಸರ ಮೇಲೆಯೇ ಹಲ್ಲೆಗೈದ ಫೋಕ್ಸೋ ಆರೋಪಿಗೆ ಲಾಠಿ ರುಚಿ

Udupi:ಪೊಲೀಸರ ಮೇಲೆಯೇ ಹಲ್ಲೆಗೈದ ಫೋಕ್ಸೋ ಆರೋಪಿಗೆ ಲಾಠಿ ರುಚಿ


ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪೋಕ್ಸೊ ಪ್ರಕರಣದ ಆರೋಪಿಯನ್ನು ಲಾಠಿ ಏಟು ಕೊಟ್ಟು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಈ ವೇಳೆ ಗಾಯಗೊಂಡ ಉಡುಪಿ ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ರಿತೇಶ್ ಹಾಗೂ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿರುವ ಉತ್ತರ ಪ್ರದೇಶ ಮೂಲದ ಮಣಿಪಾಲ ವಿ.ಪಿ.ನಗರದ ನಿವಾಸಿ ಮುಹಮ್ಮದ್ ದಾನೀಶ್(29) ಎಂಬವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ದಾಖಲಾಗಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಜು.12ರಂದು ಆರೋಪಿ ಮುಹಮ್ಮದ್ ದಾನೀಶ್ನನ್ನು ದಸ್ತಗಿರಿ ಮಾಡಿದ್ದು, ಈತನನ್ನು ತನಿಖೆಗೆ ಒಳಪಡಿಸಿ ಜು.13ರಂದು ತನಿಖೆಯ ಬಗ್ಗೆ ಮಣಿಪಾಲ ತಾಂಗೋಡು 2ನೇ ಕ್ರಾಸ್ ಹಾಡಿ ಬಳಿ ಕೃತ್ಯವೆಸಗಿದ ಸ್ಥಳದಲ್ಲಿ ಪಂಚನಾಮೆಯನ್ನು ಮಾಡಲು ಕರೆದುಕೊಯ್ಯಲಾಗಿತ್ತು. ಈ ವೇಳೆ ಆರೋಪಿ ದಾನೀಶ್ ಆತನ ಕೈಕೊಳ ಹಿಡಿದುಕೊಂಡಿದ್ದ ಸಿಬ್ಬಂದಿ ರಿತೇಶ್ ಅವರಿಗೆ ಹಲ್ಲೆ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಬಂದಿದ್ದನು. ಈ ವೇಳೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ತಡೆದಾಗ ಅವರ ಮೇಲು ಒದೆಯಲು ಬಂದಿದ್ದನು. ಆರೋಪಿಗೆ ಲಾಠಿ ರುಚಿ ತೋರಿಸಿ ಬಳಿಕ ಗಾಯಗೊಂಡ ಸಿಬ್ಬಂದಿ ರಿತೇಶ್ ಹಾಗೂ ಆರೋಪಿ ಮೊಹಮ್ಮದ್ ಡಾನೀಶ್‌ನನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. 





Ads on article

Advertise in articles 1

advertising articles 2

Advertise under the article