-->
 ಪವರ್ ಲಿಫ್ಟಿಂಗ್ ನಲ್ಲಿ ಭಾರತ ಪ್ರತಿನಿಧಿಸುತ್ತಿರುವ ಯುವತಿಗೆ ಬೇಕಿದೆ ಆರ್ಥಿಕ ನೆರವು

ಪವರ್ ಲಿಫ್ಟಿಂಗ್ ನಲ್ಲಿ ಭಾರತ ಪ್ರತಿನಿಧಿಸುತ್ತಿರುವ ಯುವತಿಗೆ ಬೇಕಿದೆ ಆರ್ಥಿಕ ನೆರವು


ಯೂರೋಪ್ ನ ಪೋಲ್ಯಾಂಡ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಉಡುಪಿ ಜಿಲ್ಲೆಯ ಕೆಳಾರ್ಕಳಬೆಟ್ಟುವಿನ ಕ್ರೀಡಾಪಟು ಪೂಜಾಳಿಗೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. 


ಕೆಳಾರ್ಕಳ ಬೆಟ್ಟುವಿನ ಕೊಜಕ್ಕುಳಿ ನಿವಾಸಿಯಾಗಿರುವ ಪೂಜಾ ಪೂಜಾರಿ 2022ರಿಂದ ಪವರ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. 2022ರಿಂದ ಈವರೆಗೂ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. 2026ರ ಜನವರಿ 7ರಿಂದ ಜ.11ರವರೆಗೆ ಹರಿಯಾಣದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಇದೀಗ ಅಂತರಾಷ್ಟಿçÃಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಪೂಜಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಮೇ ತಿಂಗಳಿನಲ್ಲಿ ಪೋಲ್ಯಾಂಡ್ ನಲ್ಲಿ ನಡೆಯಲಿರುವ ಪವರ್ ಲಿಫ್ಟಿಂಗ್ ನಲ್ಲಿ 45ಕೆಜಿ ವಿಭಾಗದಲ್ಲಿ ಪ್ರತಿನಿಧಿಸುತ್ತಿರುವ ಪೂಜಾ ಪೂಜಾರಿ ಅವರು ತಮ್ಮ ಪ್ರಯಾಣ ವೆಚ್ಚ, ವಸತಿ, ತರಬೇತಿ ಮತ್ತು ಅಂತರಾಷ್ಟ್ರೀಯ ಪಂದ್ಯಾಟಕ್ಕೆ ಅಗತ್ಯವಿರುವ ಕ್ರೀಡಾ ಉಪಕರಣಗಳ ವೆಚ್ಚ ಭರಿಸಲು ಅಸಹಾಯಕರಾಗಿದ್ದಾರೆ. ಬಡ ಕ್ರೀಡಾಪಟು ಸಹಾಯಕ್ಕಾಗಿ ಕೊರುತ್ತಿದ್ದಾರೆ.

ಮೇ. 23ರಿಂದ ಮೇ. 31ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಫೆಬ್ರವರಿ 15ರ ಒಳಗಾಗಿ 1,00,000 ಪಾವತಿಸಿ ನೊಂದಾವಣೆ ಮಾಡಲೇ ಬೇಕಿದೆ. ಅಲ್ಲದೇ ಕ್ರೀಡಾಕೂಟದ ಒಟ್ಟು ವೆಚ್ಚವು ಸುಮಾರು 2,70,000 ತಗುಲಲಿದೆ. ಆರ್ಥಿಕವಾಗಿ ಹಿಂದುಳಿದ ಪೂಜಾ ಕುಟುಂಬ ಈ ವೆಚ್ವöವನ್ನು ಭರಿಸಲು ಅಸಹಾಯಕರಾಗಿದ್ದಾರೆ. ಹಾಗಾಗಿ ಸರ್ಕಾರ ಹಾಗೂ ಕ್ರೀಡಾ ಪ್ರೇಮಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಉಡುಪಿಯ ಯುವತಿ ಪೂಜಾ ಅವರಿಗೆ ನೆರವು ನೀಡಲು ಇಚ್ಛಿಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು. 

ಹೆಸರು: ಪೂಜಾ ಪೂಜಾರಿ

ಬ್ಯಾಂಕ್ ಖಾತೆ ಸಂಖ್ಯೆ: 81980100004820

IFSC CODE : BARB0VJBAYO
MOBILE NO : 9141162590
EMAIL ID : poojarypoojapoo10@gmail.com 




Ads on article

Advertise in articles 1

advertising articles 2

Advertise under the article