ಕೋಡಿಬೆಂಗ್ರೆ ಪ್ರವಾಸಿ ಬೋಟ್ ದುರಂತ ಪ್ರಕರಣ; ಮೂವರ ಬಂಧನ
Saturday, January 31, 2026
ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ನಡೆದ ಪ್ರವಾಸಿ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ದಿ ವೇವ್ ರೈಡರ್ ಬೋಟಿನ ಚಾಲಕ ಸೂಫಿಯಾನ, ವಾಸು ಮೆಂಡನ್, ಸುಹಾಸ್ ಶ್ರೀಯಾನ್ ಬಂಧಿತರು. ಜನವರಿ 26ರಂದು ಕೋಡಿಬೆಂಗರೆ ಸಮೀಪ ಪ್ರವಾಸಿ ಬೋಟ್ ದುರಂತದಲ್ಲಿ ಮೂವರು ಪ್ರವಾಸಿಗರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.
ಬೋಟಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನ ಅಳವಡಿಸದೆ ಬೋಟ್ ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಬಂದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.