-->
ಮಲ್ಪೆ ಬಂದರಿನಲ್ಲಿ ಮತ್ಸ್ಯ ಉದ್ಯಮಿಗಳ ನಡುವೆ ಹೊಡೆದಾಟ; ಆಸ್ಪತ್ರೆಗೆ ನುಗ್ಗಿ ಹಲ್ಲೆ (Video)

ಮಲ್ಪೆ ಬಂದರಿನಲ್ಲಿ ಮತ್ಸ್ಯ ಉದ್ಯಮಿಗಳ ನಡುವೆ ಹೊಡೆದಾಟ; ಆಸ್ಪತ್ರೆಗೆ ನುಗ್ಗಿ ಹಲ್ಲೆ (Video)


ದುಡ್ಡಿನ ವ್ಯವಹಾರಕ್ಕೆ ಸಂಬಂಧಿಸಿ ಮೀನು ಉದ್ಯಮಿಗಳ ನಡುವೆ ಗುರುವಾರ ಅಪರಾಹ್ನ ಮಲ್ಪೆ ಬಂದರಿನಲ್ಲಿ ಹೊಡೆದಾಟ ನಡೆದಿದ್ದು, ಗಾಯಗೊಂಡ ಇಬ್ಬರೂ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬಾಕಿ ಇರುವ ಲಕ್ಷಾಂತರ ರೂಪಾಯಿ ದುಡ್ಡು ವಾಪಾಸು ಕೇಳಿದ ವಿಷಯಕ್ಕೆ ಜಯೇಶ್ ಕೋಟ್ಯಾನ್ ಎಂಬಾತ ಬೋಟು ಮಾಲಕ ಛೋಟಾ ಹರೀಶ್ ಎಂಬಾತನಿಗೆ ಮಲ್ಪೆ ಬಂದರಿನಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದು, ಇಬ್ಬರ ನಡುವೆ ಹೊಡೆದಾಟ ನಡೆದಿದೆ. 


ಬಳಿಕ ಇಬ್ಬರೂ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಾಲ್ವರು ಛೋಟಾ ಹರೀಶ್ ಬೆಂಬಲಿಗರು ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ಆಗಮಿಸಿ, ಜಯೇಶ್ ಗೆ ಹಲ್ಲೆ ನಡೆಸಿ ಪರಾರಿಯಾದರೆಂದು ತಿಳಿದು ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಹಾಗೂ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


Ads on article

Advertise in articles 1

advertising articles 2

Advertise under the article