3ನೇ ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್‌ಶಿಪ್, 17ನೇ ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ
ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಹಾಗೂ ಕಲ್ಯ ದೇವರಾಯ ಶೆಣೈ ಸ್ಮಾರಕ ಚೆಸ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 3ನೇ ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್‌ಶಿಪ್ ಮತ್ತು 17ನೇ ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 195 ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಟೂರ್ನಮೆಂಟ್‌ನಲ್ಲಿ ವಿವಿಧ ವಯೋವರ್ಗಗಳಲ್ಲಿ ಪಂದ್ಯಗಳು ನಡೆಯಿತು ಒಟ್ಟು 98 ಟ್ರೋಫಿಗಳು ಹಾಗೂ ₹28,500 ನಗದು ಬಹುಮಾನಗಳನ್ನು ವಿಜೇತರಿಗೆ ವಿತರಿಸಲಾಯಿತು.
ಬೆಸ್ಟ್ ಅಕಾಡೆಮಿ ಪ್ರಶಸ್ತಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಹಾಗು ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಉಪ್ಪುಂದ ತಮ್ಮದಾಗಿಸಿಕೊಂಡರು. ಓಪನ್ ವಿಭಾಗದಲ್ಲಿ ನಿಹಾಲ್ ಎನ್. ಶೆಟ್ಟಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಅನೀಶ್ ಎಸ್.ಸಿ. ದ್ವಿತೀಯ ಸ್ಥಾನ ಹಾಗೂ ಚಿನ್ಮಯ ಎಸ್. ಭಟ್ ತೃತೀಯ ಸ್ಥಾನ ಗಳಿಸಿದರು. ಉತ್ತಮ ವೇಟರನ್ ಆಟಗಾರ ಪ್ರಶಸ್ತಿಯನ್ನು ರಾಮ ಶೆರಿಗಾರ್ ಹಾಗೂ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಶಾನ್ವಿ ಎಸ್. ಬಳ್ಳಾಲ್ ಪಡೆದರು.
ಅಂಡರ್–7 ಬಾಲಕರು ವಿಭಾಗದಲ್ಲಿ ಪರೀಕ್ಷಿತ್ ಬಿ. ಖರ್ವಿ ಪ್ರಥಮ ಹಾಗೂ ಸಮ್ರಾಟ್ ಬೆಲ್ಚಡ ಕೇ ದ್ವಿತೀಯ ಸ್ಥಾನ ಪಡೆದರು. ಅಂಡರ್–7 ಬಾಲಕಿಯರು ವಿಭಾಗದಲ್ಲಿ ಅನೇಕರ ಎ. ಸಲಿಯಾನ್ ಪ್ರಥಮ ಸ್ಥಾನ ಗಳಿಸಿದರು.
ಅಂಡರ್–9 ಬಾಲಕರು ವಿಭಾಗದಲ್ಲಿ ಪ್ರಮುಖ್ ಬಿ. ಪೂಜಾರಿ ಪ್ರಥಮ ಹಾಗೂ ಶ್ರೀನಿತ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಅಂಡರ್–9 ಬಾಲಕಿಯರು ವಿಭಾಗದಲ್ಲಿ ಬ್ರಹ್ಮೀಪ್ರೀಯ ಪ್ರಥಮ ಮತ್ತು ಇಂಚರ ಉಡುಪಿ ದ್ವಿತೀಯ ಸ್ಥಾನ ಗಳಿಸಿದರು.
ಅಂಡರ್–11 ಬಾಲಕರು ವಿಭಾಗದಲ್ಲಿ ಅಥರ್ವ ಪ್ರಥಮ ಹಾಗೂ ಮಾಧ್ವ ವ್ಯಾಸರಾಜ್ ತಾಂತೆಯ್ ದ್ವಿತೀಯ ಸ್ಥಾನ ಪಡೆದರು. ಅಂಡರ್–11 ಬಾಲಕಿಯರು ವಿಭಾಗದಲ್ಲಿ ನಿರ್ವಿ ಪೂಜಾರಿ ಪ್ರಥಮ ಮತ್ತು ಸಾನ್ವಿಕಾ ಎಸ್. ಗಣಿಗಾ ದ್ವಿತೀಯ ಸ್ಥಾನ ಗಳಿಸಿದರು.
ಅಂಡರ್–13 ಬಾಲಕರು ವಿಭಾಗದಲ್ಲಿ ಉತ್ಸವ್ ಬಿ. ಪಿ. ಪ್ರಥಮ ಹಾಗೂ ಅವನೀಶ್ ಪ್ರಸಾದ್ ಕೆ ದ್ವಿತೀಯ ಸ್ಥಾನ ಪಡೆದರು. ಅಂಡರ್–13 ಬಾಲಕಿಯರು ವಿಭಾಗದಲ್ಲಿ ಅಲಿಶಾ ರೋಡ್ರಿಗಸ್ ಪ್ರಥಮ ಹಾಗೂ ಅಕ್ಷರ ಎ. ದ್ವಿತೀಯ ಸ್ಥಾನ ಗಳಿಸಿದರು.
ಅಂಡರ್–15 ಬಾಲಕರು ವಿಭಾಗದಲ್ಲಿ ಕೃಷಾಂಗ್ ಪ್ರಭು ಪ್ರಥಮ ಹಾಗೂ ಅಂಬರ್ಿಷ್ ಉಪಾಧ್ಯಾಯ ದ್ವಿತೀಯ ಸ್ಥಾನ ಪಡೆದರು. ಅಂಡರ್–15 ಬಾಲಕಿಯರು ವಿಭಾಗದಲ್ಲಿ ಶ್ರಿಲಥಾ ಎಸ್. ನಾಯಕ್ ಪ್ರಥಮ ಮತ್ತು ಸಾಥ್ವಿ ದ್ವಿತೀಯ ಸ್ಥಾನ ಗಳಿಸಿದರು.
ಅಂಡರ್–17 ಬಾಲಕರು ವಿಭಾಗದಲ್ಲಿ ಕಲಾಶ್ ಪಠಕ್ ಪ್ರಥಮ ಹಾಗೂ ಅಭಯ ಕಾಮತ್ ದ್ವಿತೀಯ ಸ್ಥಾನ ಪಡೆದರು. ಅಂಡರ್–17 ಬಾಲಕಿಯರು ವಿಭಾಗದಲ್ಲಿ ಅದ್ವಿಕಾ ಪ್ರಭು ಪ್ರಥಮ ಮತ್ತು ಕೃತಿ ಎ.ಜಿ. ಖರ್ವಿ ದ್ವಿತೀಯ ಸ್ಥಾನ ಗಳಿಸಿದರು.
ಅಂಡರ್–19 ಬಾಲಕರು ವಿಭಾಗದಲ್ಲಿ ನಿಖಿಲ್ ವಿಕ್ರಮ್ ಕೆ.ಎಸ್. ಪ್ರಥಮ ಹಾಗೂ ದಕ್ಷ್ ಕೆ. ಜೋಗಿ ದ್ವಿತೀಯ ಸ್ಥಾನ ಪಡೆದರು. ಪ್ರತಿ ವಯೋವರ್ಗದ ಮೊದಲ ಎರಡು ಸ್ಥಾನ ಪಡೆದ ಆಟಗಾರರು ರಾಜ್ಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಶೆಣೈ ಕಲ್ಯ ,ಡಾ ಸುರೇಶ್ ಶೆಣೈ, ಡಾ. ಶೋಭಾ ಕಾಮತ್, ಡಾ. ರಾಘವೇಂದ್ರ ನಾಯಕ್, ಡಾ. ಉಲ್ಲಾಸ್ ಕಾಮತ್, ಡಾ. ಪ್ರಕಾಶ್ ಶ ಶೆಣೈ ಕಲ್ಯ , ಲಯನ್ ಟಿ. ಕೇಶವರಾಯ ಪೈ, ಡಾ. ನಿಶಾಂತ್ ಭಟ್ (ಲಯನ್ಸ್ ಕ್ಲಬ್, ಮಣಿಪಾಲ ಅಧ್ಯಕ್ಷರು), ಶ್ರೀ ಉಮಾನಾಥ್ ಕಾಪು (ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರು), ಡಾ. ಕೆ. ರಾಜಗೋಪಾಲ್ ಶೆಣೈ (ಕಲ್ಯ ದೇವರಾಯ ಶೆಣೈ ಸ್ಮಾರಕ ಚೆಸ್ ಫೌಂಡೇಶನ್ ಅಧ್ಯಕ್ಷರು – ಎಂ. ರಮೇಶ್ ಕಿಣಿ ಹಾಗೂ ಡಾ. ಎಚ್. ಗಣೇಶ್ ಪೈ (ಮುಖ್ಯ ಆಯೋಜಕರು) ಅತಿಥಿಗಳಾಗಿ ಉಪಸ್ಥಿತರಿದ್ದರು.