-->
ಕಾಪು: ಅಪಘಾತದಲ್ಲಿ ಗಾಯಗೊಂಡಿದ್ದ ಹೋಟೆಲ್ ಉದ್ಯಮಿ ನಿಧನ

ಕಾಪು: ಅಪಘಾತದಲ್ಲಿ ಗಾಯಗೊಂಡಿದ್ದ ಹೋಟೆಲ್ ಉದ್ಯಮಿ ನಿಧನ

ಕಾಪು ಕೊಪ್ಪಲಂಗಡಿಯ ಹೋಟೆಲ್ ಉದ್ಯಮಿ ಕೊಪ್ಪಲಂಗಡಿ ಉಮೇಶ್ ನಾಯಕ್  (ದಿ. ವಿಟ್ಟಪ್ಪ ಎಂ. ನಾಯಕ್, ಮಾಜಿ ಉಪಪ್ರಧಾನ, ಅವರ ಪುತ್ರ) ಅವರು ಇಂದು ಉಡುಪಿಯ ಮಿಷನ್ ಆಸ್ವತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು

ಒಂದು ತಿಂಗಳ ಹಿಂದೆ ರಾ.ಹೆ.66 ಕಾಪು ಮಾರಿಗುಡಿ ಎದುರಿನ K1 ಹೋಟೆಲ್ ಮುಂಬಾಗದಲ್ಲಿ ನಡೆದ ಬೈಕ್-ಸ್ಕೂಟರ್ ಮುಖಾಮುಖಿ ಡಿಕ್ಕಿಯಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ವತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು. 


Ads on article

Advertise in articles 1

advertising articles 2

Advertise under the article