-->
ಭರತನಾಟ್ಯ ಕಲಾವಿದೆಯರಾದ ಪೂರ್ವಿ ಮತ್ತು ಗಾರ್ಗಿದೇವಿ ರಂಗಪ್ರವೇಶ ಕಾರ್ಯಕ್ರಮ

ಭರತನಾಟ್ಯ ಕಲಾವಿದೆಯರಾದ ಪೂರ್ವಿ ಮತ್ತು ಗಾರ್ಗಿದೇವಿ ರಂಗಪ್ರವೇಶ ಕಾರ್ಯಕ್ರಮ


ಭರತನಾಟ್ಯದಂತಹ ಶ್ರೀಮಂತ ಕಲೆಯನ್ನು ಕರಗತ ಮಾಡಿಕೊಳ್ಳುವುದೇ ಒಂದು ಕಲೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕರಾದ ಮೋಹನ ಆಳ್ವ ಹೇಳಿದರು. 


ಅವರು  ಏಪ್ರಿಲ್ 18ರಂದು ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆದ ವಿದುಷಿ ಪ್ರವಿತಾ ಅಶೋಕ್ ಮತ್ತು ಅಶೋಕ್ ದಂಪತಿಗಳ ಮಕ್ಕಳಾದ ಭರತನಾಟ್ಯ ಕಲಾವಿದೆಯರಾದ ಪೂರ್ವಿ ಮತ್ತು ಗಾರ್ಗಿದೇವಿ ರಂಗಪ್ರವೇಶ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 


ಕಲೆ  ಮತ್ತು ಸಂಸ್ಕೃತಿಗಳ ಸಮ್ಮಿಲನದಂತೆ ಈ ಕಾರ್ಯಕ್ರಮ ಮೂಡಿಬಂದಿದೆ. ಗುರುಗಳ ಪರಿಶ್ರಮ, ಆಶಯದಂತೆ ಭರತನಾಟ್ಯದ ಶಾಸ್ತ್ರೀಯತೆಗೆ ತಕ್ಕಂತೆ ರಂಗಪ್ರವೇಶ ಮೂಡಿಬಂದಿದೆ ಎಂದರಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭರತನಾಟ್ಯ ಕಲಾವಿದೆಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಮಾಡುವ ಆಶಯವನ್ನು ವ್ಯಕ್ತಪಡಿಸಿದರು. 


ಮುಖ್ಯ ಅತಿಥಿಗಳಾಗಿ  ಬೆಂಗಳೂರಿನ ಚಿತ್ಕಲಾ ನೃತ್ಯ ಶಾಲೆಯ ಭರತನಾಟ್ಯ ಕಲಾವಿದ ಪಿ.ಪ್ರವೀಣ್ ಕುಮಾರ್ ಮಾತನಾಡಿ, ಕಲಾವಿದೆಯರು ನೀಡಿದ ಒಂದೊಂದು ನೃತ್ಯ ಪ್ರದರ್ಶನದಲ್ಲಿಯೂ ಅವರದ್ದೇ ಆದ ಅನನ್ಯತೆ ಮತ್ತು ಸ್ವಂತದ್ದಾದ ಶೈಲಿ ಎದ್ದು ಕಾಣುತ್ತಿತ್ತು. ಕಲಾವಿದೆರಿಬ್ಬರಿಗೂ ಒಳ್ಳೆಯ ಭವಿಷ್ಯವಿದೆ ಎಂದು ಹೇಳಿದರು. 

ಇನ್ನೋರ್ವ ಅತಿಥಿ  ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಕೆ.ಚಂದ್ರಶೇಖರ ನಾವಡ ಅವರು ಮಾತನಾಡಿ, ತುಂಬಾ ಸಂದರ್ಭದಲ್ಲಿ ರಂಗಪ್ರವೇಶದ ನಂತರ ಭರತನಾಟ್ಯದ ಬಗ್ಗೆ ಕೆಲವರು ಆಸಕ್ತಿ ಕಡಿಮೆ ಮಾಡಿಕೊಂಡುಬಿಡುತ್ತಾರೆ. ಆದರೆ ರಂಗಪ್ರವೇಶದ ನಂತರವು ಭರತನಾಟ್ಯವನ್ನು ಇನ್ನೂ ಹೊಸತನದ ನೆಲೆಯಲ್ಲಿ ಪ್ರಸ್ತುತ ಪಡಿಸಬೇಕು ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿಗಳಾದ ಎಸ್ ವ್ಯಾಸ (ಡೀಮ್ಡ್ ಯೂನಿವರ್ಸಿಟಿ) ಇಲ್ಲಿನ ಯೋಗ ಮತ್ತು ಮಾನವೀಯ ವಿಜ್ಞಾನ ಇದರ ಡೀನ್ ಡಾ.ಕರುಣಾ ವಿಜಯೇಂದ್ರ ಮಾತನಾಡಿ ತಾನು ಅತ್ಯಂತ ಆಸೆಯಿಂದ ಕಾರ್ಯಕ್ರಮಕ್ಕೆ ಬಂದಿರುವುದು ಸಾರ್ಥಕ ಎನಿಸಿತು. ಯಾಕೆಂದರೆ ಕಲಾವಿದೆಯರು ಮನಸಿಗೆ ಮುಟ್ಟುವಷ್ಟು ನೃತ್ಯದ ರಸದೌತಣ ಉಣಬಡಿಸಿದ್ದಾರೆ.ಗುರುಗಳ ಸರಿಯಾದ ಮಾರ್ಗದರ್ಶನ ಮತ್ತು ಕಲಾವಿದೆಯರ ಪರಿಶ್ರಮ ನೃತ್ಯದುದ್ದಕ್ಕೂ ಎದ್ದು ಕಾಣುತ್ತಿತ್ತು. ಇವರುಗಳು ಭರವಸೆಯ ಕಲಾವಿದೆಯರಾಗುವುದು ಖಂಡಿತ ಎಂದು ಹೇಳಿದರು. 

ನೃತ್ಯ ವಸಂತ ನಾಟ್ಯಾಲಯ (ರಿ) ಕುಂದಾಪುರ ಇದರ ನೃತ್ಯ ಗುರು ವಿದುಷಿ ಪ್ರವಿತಾ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಲತಾ ಸಂಗ್ರಾಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Ads on article

Advertise in articles 1

advertising articles 2

Advertise under the article