-->
ಚಿಟ್ಪಾಡಿಯ ಮೋಟಾರು ರಿಪೇರಿಯ ರಾಮಣ್ಣ (ರಾಮ ಸೇರಿಗಾರ್) ಇನ್ನಿಲ್ಲ

ಚಿಟ್ಪಾಡಿಯ ಮೋಟಾರು ರಿಪೇರಿಯ ರಾಮಣ್ಣ (ರಾಮ ಸೇರಿಗಾರ್) ಇನ್ನಿಲ್ಲ


ಪ್ರಸಿದ್ಧ ಮೋಟಾರು ರಿವೈಂಡಿಂಗ್ ಕೆಲಸಗಾರ, ಉಡುಪಿಯ ಚಿಟ್ಪಾಡಿ ನಿವಾಸಿ ರಾಮ ಸೇರಿಗಾರ್ (79) ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ. ಮೋಟಾರು ರಿಪೇರಿಯ ರಾಮಣ್ಣ ಎಂದೇ ಪರಿಚಿತರಾಗಿದ್ದ ರಾಮ ಸೇರಿಗಾರ್ ಚಿಟ್ಪಾಡಿಯಲ್ಲಿ ಜನಾನುರಾಗಿದ್ದರು.

ಮೃತರು ಪತ್ನಿ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರಾಮ ಸೇರಿಗಾರ ಅವರು ಚಿಟ್ಪಾಡಿಯ ತಮ್ಮ ನಿವಾಸದಲ್ಲಿ ಹಲವಾರು ವರ್ಷಗಳಿಂದ ಮೋಟಾರು ರಿವೈಂಡಿಂಗ್ ಕೆಲಸ ಮಾಡುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಕ್ರಿಯ ರಾಗಿದ್ದರು. ಅವರ ಅಗಲುವಿಕೆಗೆ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದಾರೆ. ಮೃತರ ಅಂತ್ಯಸಂಸ್ಕಾರವು ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನೆರವೇರಲಿದೆ.

Ads on article

Advertise in articles 1

advertising articles 2

Advertise under the article