-->
ಕುಕ್ಕಿಕಟ್ಟೆಯಲ್ಲಿ ನಾದಶ್ರೀ ಕ್ರೆಡಿಟ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ

ಕುಕ್ಕಿಕಟ್ಟೆಯಲ್ಲಿ ನಾದಶ್ರೀ ಕ್ರೆಡಿಟ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ


ನಾದಶ್ರೀ ಕ್ರೆಡಿಟ್ ಕೋ.ಆ. ಸೊಸೈಟಿಯ ನೂತನ ಕಟ್ಟಡ "ಶ್ರೀಲಕ್ಷ್ಮೀ" ಶಿವಮೊಗ್ಗ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಡಾ.ಬಿ.ಎಸ್ ಶೇರಿಗಾರ್ ಉದ್ಘಾಟಿಸಿದರು


ಬಳಿಕ ಮಾತನಾಡಿದ ಅವರು, ಸ್ವಸಹಾಯ, ಸ್ವಜವಾಬ್ದಾರಿ, ಪಾರದರ್ಶಕತೆ, ಸಮಾನತೆ, ನ್ಯಾಯ, ಏಕತೆ ಗಮನದಲ್ಲಿ ಇಟ್ಟು ಕೊಂಡು ಸಹಕಾರಿ ಸಂಸ್ಥೆ ನಡೆಸಿದರೆ, ಸಮಾಜದಲ್ಲಿ ಸಹಕಾರಿ ಜೀವನ ಶೈಲಿ ಹೆಚ್ಚು ಪ್ರಚಲಿತ, ಪ್ರಸ್ತುತ ಆಗಲಿದೆ ಎಂದರು.


ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಶಾಸಕ ಯಶ್ಪಾಲ್ ‌ಸುವರ್ಣ, ಎಲ್ಲರೂ ಒಗ್ಗಟ್ಟಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಕ್ಷೇತ್ರ ಇನ್ನಷ್ಟು ಅಭಿವೃದ್ದಿ ಹೊಂದಲು ಸಾಧ್ಯ. ಜನರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು. ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಗೌರವ ತರುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿ ಇನ್ನಷ್ಟು ಉತ್ತೇಜನ ನೀಡುವ ಕೆಲಸವಾಗಿದೆ .ಆರ್ಥಿಕ ಸಂಸ್ಥೆ ಎಂದರೆ ಮುಳ್ಳಿನ ಹಾಸಿಗೆಯಲ್ಲಿ ಮಲಗಿದಂತೆ. ಆದರೆ ಇದನ್ನೆಲ್ಲವನ್ನು ಮೀರಿ ನಾದಶ್ರೀ ಜನರ ವಿಶ್ವಾಸವನ್ನು ಗಳಿಸಿದೆ ಎಂದರು.


ಸಂಸ್ಥೆಯ ಆಡಳಿತ ಕಚೇರಿ ಕೊಠಡಿ ಉದ್ಘಾಟಿಸಿದ ಸಹಕಾರ ರತ್ನ ಇಂದ್ರಾಳಿ ಜಯಕರ್ ಶೆಟ್ಟಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಯ ಜನರು 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಠೇವಣಿ ಇಟ್ಟಿದ್ದಾರೆ. ಸಹಕಾರಿ ಸಂಸ್ಥೆಗಳು ಲಾಭಾಂಶದ ಶೇ. 1ರಷ್ಟನ್ನು ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಬೇಕು ಎಂದರು. 


ಸೊಸೈಟಿ ಅಧಕ್ಷ ಲಚ್ಚೇಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯಬೆಳವಣಿಗೆಗೆ ಸಂಸ್ಥೆಯ ಸಹಕರಿಸಿದವರನ್ನು ಗೌರವಿಸಲಾಯಿತು. ಯೂನಿಯನ್ ನಿರ್ದೇಶಕ ಹರೀಶ್ ಕಿಣಿ ಅಲೆವೂರು, ಕೊರಂಗ್ರಪಾಡಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ದೇವಾಡಿಗ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಮಾಜಿ ಅಧ್ಯಕ್ಷ ಚಂದ್ರಕಾಂತ್ ದೇವಾಡಿಗ, ಜೀವರತ್ನ ದೇವಾಡಿಗ, ಆಡಳಿತ ಮಂಡಳಿ ನಿರ್ದೇಶಕ ಹೇಮಂತ್ ಕುಮಾರ್, ನಾಗೇಶ್ ದೇವಾಡಿಗ, ಗೋಪಾಲ ಸೇರಿಗಾರ, ಕುಮಾರ ಸೇರಿಗಾರ, ಸುಧಾಕರ ಬಂಗೇರ, ರಮೇಶ್ ಶೆಟ್ಟಿ, ಗೋವಿಂದ ನಾಯ್ಕ, ಪ್ರದೀಪ್ ಕಾಮತ್, ಸುಧೀರ್ ಚಿಟ್ಟಾಡಿ, ಅನುರಾಧಾ ಶ್ರೀಧರ್ ದೇವಾಡಿಗ, ಮೀರಾ ಉಮೇಶ್ ದೇವಾಡಿಗ, ಸುಮಾ ಅನಂತ ದೇವಾಡಿಗ ಉಪಸ್ಥಿತರಿದ್ದರು.

ಸಿಇಒ ಕಾರ್ತಿಕ್‌ ಕುಮಾರ್‌ಸ್ವಾಗತಿಸಿ, ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಉಪಾಧ್ಯಕ್ಷ ಮನೋಹರ ದೇವಾಡಿಗ ವಂದಿಸಿ, ಸಚ್ಚೇಂದ್ರ ಅಂಬಾಗಿಲು ನಿರೂಪಿಸಿದರು.

 

 

Ads on article

Advertise in articles 1

advertising articles 2

Advertise under the article