-->
ಮಣಿಪಾಲ ಕಿಡ್ನಾಪ್ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಣಿಪಾಲ ಕಿಡ್ನಾಪ್ ಪ್ರಕರಣ: ನಾಲ್ವರು ಆರೋಪಿಗಳ ಬಂಧನ


ಮಣಿಪಾಲದಲ್ಲಿ ವ್ಯಕ್ತಿಯೊಬ್ಬರ ಅಪಹರಣ ಪ್ರಕರಣವನ್ನು ಬೇಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿ ನಾಲ್ಕು ಮಂದಿ ಆರೋಪಿಗಳನ್ನು ಮಣಿಪಾಲ ಪೊಲೀಸರು ತೆಲಂಗಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ತೆಲಂಗಾಣ ತಾಂಡ್ಯ ರಮಾನಾಥ ಶ್ರೀನು (30),ಪಡಮಡಿ ತಾಂಡ್ಯದ ಮೋಹನ್ ರಮವಾತ್ (22), ದೇವರಕೊಂಡ ಚಿಂತಾಲ್ ತಾಂಡಾದ ಪರಮೇಶ್ (30), ಚಿಂತಾಲ್ ತಾಂಡಾದ ಪಾಲ್ತ್ಯ ವಿಜಯ್ (25) ಬಂಧಿತರು.

ಮಣಿಪಾಲದಲ್ಲಿ ರಾಜೇಶ್ ಎಂಬವರನ್ನು ಕಾರಿನಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಣ ಮಾಡಲಾಗಿತ್ತು. ತೆಲಂಗಾಣದಲ್ಲಿರುವ ವ್ಯವಹಾರದ ವಿಚಾರವಾಗಿ ಅಪಹರಣ ಮಾಡಲಾಗಿದೆ ಎಂದು ಅವರ ಸಹೋದರ ಮಣಿಪಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಮಣಿಪಾಲ ಪೊಲೀಸ್‌  ನಿರೀಕ್ಷಕರಾದ ಮಹೇಶ ಪ್ರಸಾದ್‌ ಅವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್‌ ಠಾಣಾ ಪಿಎಸ್‌ ಐ ತಿಮ್ಮೇಶ್‌ ಬಿ ಎನ್‌, ಉಡುಪಿ ಸೈಬರ್ ಪೊಲೀಸ್ ಠಾಣಾ ಪಿ.ಎಸ್‌.ಐ ಸುದರ್ಶನ್‌ ದೊಡ್ಡಮನಿ ಹಾಗೂ ಠಾಣಾ ಅಪರಾಧ ಸಿಬ್ಬಂದಿಗಳಾದ ಎಎಸ್‌ಐ ವಿವೇಕಾನಂದ, ಹೆಚ್‌ಸಿ ಮಹಮ್ಮದ್‌ ಅಜ್ಮಲ್‌ ಹೈಕಾಡಿ, ಹೆಚ್‌ಸಿ ಚೇತನ್‌,  ಮಲ್ಪೆ ಠಾಣಾ ಹೆಚ್‌ಸಿ ಲೋಕೇಶ್‌, ಉಡುಪಿ ನಗರ ಠಾಣಾ ಪಿಸಿ ಶಿವಕುಮಾರ್‌, ಬ್ರಹ್ಮಾವರ ಪೊಲೀಸ್‌ ಠಾಣಾ ಪಿಸಿ ಕಿರಣ್‌, ಮಣಿಪಾಲ ಠಾಣಾ ಪಿಸಿ ತಿಮ್ಮಯ್ಯ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳನ್ನು  ತೆಲಂಗಾಣ ರಾಜ್ಯದ ಜಗತಿಹಾಳ್‌ ಜಿಲ್ಲೆಯ  ಮುಖ್ಯ  ರಸ್ತೆ  ಕರಿಂ ನಗರದ  ಗೋವಿಂದಪಲ್ಲಿ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ.

Ads on article

Advertise in articles 1

advertising articles 2

Advertise under the article