-->
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ದೀಪಾಲಂಕಾರ ಉದ್ಘಾಟನೆ

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ದೀಪಾಲಂಕಾರ ಉದ್ಘಾಟನೆ


ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವದ ದೀಪಾಲಂಕಾರವನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಉದ್ಘಾಟಿಸಿದರು.


ಈ ವೇಳೆ ಮಾತನಾಡಿದ ತಲ್ಲೂರು ಶಿವರಾಮ ಶೆಟ್ಟಿ ಎಲ್ಲಿ ನಾವು ದೀಪವನ್ನು ಬೆಳಗುತ್ತೇವೊ ಅಲ್ಲಿ ಭಗವಂತನ ಸಾನಿಧ್ಯ ಇದ್ದೇ ಇರುತ್ತದೆ. ಭಗವಂತನಲ್ಲಿ ನಮ್ಮ ಕಷ್ಟವನ್ನು ತೋಡಿಕೊಂಡಾಗ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಭಗವಂತನನ್ನು ತೃಪ್ತಿಗೊಳಿಸುವ ಸಲುವಾಗಿ ಬ್ರಹ್ಮಕಲಶ ನಡೆಯುತ್ತಿದ್ದು ಭಕ್ತಾದಿಗಳೆಲ್ಲರೂ ಸೇರಿ ದೇವರ ಸೇವೆ ಮಾಡುವ ಮೂಲಕ ಅದನ್ನು ಯಶಸ್ವಿಗೊಳಿಸಬೇಕು. ದೇವರ ಕಾರ್ಯವನ್ನು ಎಲ್ಲೇ ಹಮ್ಮಿಕೊಂಡರೂ ಕೂಡ ಭಕ್ತರು ತಮ್ಮ ಸೇವೆಯನ್ನು ತನು ಮನ ಧನದ ಮೂಲಕ ನೀಡಿ ಯಶಸ್ವಿಗೊಳಿಸುತ್ತಾರೆ ಎಂದರು.

ಈ ವೇಳೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ,  ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ , ಹಿರಿಯರಾದ ಭುಜಂಗ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ರಮೇಶ್ ಕಾಂಚನ್, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.



Ads on article

Advertise in articles 1

advertising articles 2

Advertise under the article