ಅಬುದಾಬಿ ಲಕ್ಕಿ ಡ್ರಾದಲ್ಲಿ ಉಡುಪಿ ಯುವಕನಿಗೆ 49 ಕೋಟಿ ರೂ. ಬಹುಮಾನ
Thursday, February 05, 2026
ಅಬುದಾಬಿಯ ಲಕ್ಕಿ ಡ್ರಾನಲ್ಲಿ ಉಡುಪಿಯ ಯುವಕನಿಗೆ 49 ಕೋಟಿ ರೂ. ಬಹುಮಾನ ಸಿಕ್ಕಿದೆ. ಉಡುಪಿಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಬಹುಮಾನ ವಿಜೇತರಾಗಿದ್ದಾರೆ.
ಯುವಕನಿಗೆ 20 ಮಿಲಿಯನ್ ದಿರಾಮ್ ಬಹುಮಾನ ಲಭಿಸಿದೆ. ಅಬುದಾಬಿಯಲ್ಲಿ ಬಿಗ್ ಟಿಕೆಟ್ ಲಕ್ಕಿ ಡ್ರಾ ನಡೆದಿತ್ತು. ಮುಖ್ಯ ಜಾಕ್ಪಾಟ್ ಜೊತೆಗೆ ಹಲವು ಹೆಚ್ಚುವರಿ ಬಹುಮಾನಗಳು ಇದ್ದ ಲಕ್ಕಿ ಡ್ರಾ ಇದಾಗಿತ್ತು. ನೇರ ಪ್ರಸಾರ ಡ್ರಾದಲ್ಲಿ ಬಹುಮಾನ ಘೋಷಣೆ ಮಾಡಲಾಯಿತು.ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಸೇಲ್ಸ್ ವಿಭಾಗದಲ್ಲಿ ಶಂತನು ದುಡಿಯುತ್ತಿದ್ದರು. ಸ್ನೇಹಿತನ ಜೊತೆ ಸೇರಿ ಟಿಕೆಟ್ ಖರೀದಿಸಿದ್ದರು. ಬಹುಮಾನವನ್ನು ಸ್ನೇಹಿತನ ಜೊತೆ ಹಂಚಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಬಹುಮಾನದ ಹಣವನ್ನು ಏನು ಮಾಡುವುದು ಎಂದು ನಿರ್ಧರಿಸಿಲ್ಲ. ಕುಟುಂಬದ ಜೊತೆ ಶಂತನು ಸಂತೋಷ ಹಂಚಿಕೊOಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು ಪರಿಸರದಲ್ಲಿ ಶಂತನು ಕುಟುಂಬ ನೆಲೆಸಿದೆ.