-->
 ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಬರಹ: ಇಬ್ಬರ ಬಂಧನ

ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಬರಹ: ಇಬ್ಬರ ಬಂಧನ


ಸಾಮಾಜಿಕ ಜಾಲತಾಣದಲ್ಲಿ ಹಿಂದೂ ವಿವಾಹಿತ ಮಹಿಳೆ ಹಾಗೂ ಮುಸ್ಲಿಂ ಯುವಕನ ಕುರಿತು ವಿವಾದಾತ್ಮಕ ಬರಹಗಳನ್ನು ಹಂಚಿಕೊOಡಿರುವ ಪ್ರಕರಣಕ್ಕೆ ಸಂಬOಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿತೇಶ್ ಹಾಗೂ ಕಡಬದ ಸಿರಿಬಾಗಿಲು ನಿವಾಸಿ ಹಿತೇಶ್ ಬಂಧಿತ ಆರೋಪಿಗಳು. 2025ರ ಮೇ.16ರಂದು ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳದ ಮಹಿಳೆ ಹಾಗೂ ಯುವಕನೊಬ್ಬನ ಕುರಿತು ವಿವಾದಾತ್ಮಕ ಬರಹಗಳನ್ನು ಹಂಚಿಕೊOಡಿದ್ದರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿತೇಶ್‌ನನ್ನು ಪುತ್ತೂರಿನಲ್ಲಿ ಹಾಗೂ ಹಿತೇಶ್‌ನನ್ನು ಮಂಗಳೂರಿನ ಲಾಲ್‌ಭಾಗ್ ಬಳಿ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 


Ads on article

Advertise in articles 1

advertising articles 2

Advertise under the article