ರೀಲ್ಸ್ ಹುಚ್ಚಿಗೆ ಬೈಕ್ ಸ್ಟಂಟ್; ಬಿಜೆಪಿ ಮುಖಂಡನ 15 ವರ್ಷದ ಪುತ್ರ ಬಲಿ
Friday, March 20, 2026
ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್ ಹುಚ್ಚಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಅತೀ ವೇಗವಾಗಿ ಬೈಕ್ ಮತ್ತು ಆಡಿ ಕಾರು ಚಲಾಯಿಸುವ ಸಾಹಸದ ವಿಡಿಯೋ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದ್ದು, ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರ 15 ವರ್ಷದ ಪುತ್ರ ನಮೀಷ್ ಸಂಗಳದ ಮೃತಪಟ್ಟಿದ್ದಾನೆ.
ಈತ ಮೈಸೂರಿನ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಕಾರು ಚಲಾಯಿಸುತ್ತಿದ್ದವನೂ ಅಪ್ರಾಪ್ತನಾಗಿದ್ದ ಎಂದು ತಿಳಿದು ಬಂದಿದೆ. ಐಶಾರಾಮಿ ಕಾರು ಹಾಗೂ ಬೈಕ್ ನಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದು, ಈ ವೇಳೆ ಕಾರು ಬೈಕ್ ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ನಮೀಷ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.