-->
ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್ ಗೆ 2ರಿಂದ 2.35 ರಷ್ಟು ಏರಿಕೆ

ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್ ಗೆ 2ರಿಂದ 2.35 ರಷ್ಟು ಏರಿಕೆ


ಇಂದಿನಿOದ ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್ ಗೆ 2ರಿಂದ 2.35 ರಷ್ಟು ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಕೇವಲ 'ಪ್ರೀಮಿಯಂ' ಪೆಟ್ರೋಲ್ ( IOCL ನ XP95, HPCL ನ Power) ವಿಧಗಳಿಗೆ ಮಾತ್ರ ಅನ್ವಯಿಸುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಭಾರೀ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರತಿ ಲೀಟರ್ ಪ್ರೀಮಿಯಂ ಪೆಟ್ರೋಲ್‌ಗೆ 2 ರೂ. ದರ ಏರಿಕೆ ಮಾಡಲಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಮಾತ್ರ ಏರಿಕೆ ಕಂಡಿದ್ದು, ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪ್ರೀಮಿಯಂ ಪೆಟ್ರೋಲ್‌ನಲ್ಲಿ ಆಕ್ಟೇನ್ ರೇಟಿಂಗ್ ಹೆಚ್ಚು ಇರುತ್ತದೆ. ಪೆಟ್ರೋಲ್ ಸಾಮಾನ್ಯವಾಗಿ 91 ರ ಆಕ್ಟೇನ್ ರೇಟಿಂಗ್ ಅನ್ನು ಹೊಂದಿದ್ದರೆ ಪ್ರೀಮಿಯಂ ಅಥವಾ ಪವರ್ ಪೆಟ್ರೋಲ್‌ನ ಆಕ್ಟೇನ್ ರೇಟಿಂಗ್ ಸಾಮಾನ್ಯವಾಗಿ 93 ರಿಂದ 97 ಇರುತ್ತದೆ. ಇದರಿಂದ ಪ್ರೀಮಿಯಂ ಪೆಟ್ರೋಲ್ ದರ ಹೆಚ್ಚು.

Ads on article

Advertise in articles 1

advertising articles 2

Advertise under the article