-->
ಯಕ್ಷ ಲೋಕದ ಭೀಷ್ಮ ಸೂರಿಕುಮೇರು ಕೆ. ಗೋವಿಂದ ಭಟ್ ನಿಧನ

ಯಕ್ಷ ಲೋಕದ ಭೀಷ್ಮ ಸೂರಿಕುಮೇರು ಕೆ. ಗೋವಿಂದ ಭಟ್ ನಿಧನ


ತೆಂಕುತಿಟ್ಟು ಯಕ್ಷಗಾನ ಲೋಕದ ಹಿರಿಯ ಕಲಾವಿದ, ಯಕ್ಷಗಾನದ ಭೀಷ್ಮ'ಎಂದೇ ಖ್ಯಾತರಾಗಿದ್ದ ಸೂರಿಕುಮೇರು ಕೆ. ಗೋವಿಂದ ಭಟ್ ಅವರು ತೀರ್ಥಹಳ್ಳಿಯ ಹೆದ್ದೂರಿನಲ್ಲಿ ತನ್ನ ಹಿರಿಯ ಪುತ್ರನ ಮನೆಯಲ್ಲಿ ನಿಧನರಾದರು. 

70ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ರಂಗದಲ್ಲಿ ತಿರುಗಾಟ ನಡೆಸಿದ್ದ ಅವರು, 'ಎಪ್ಪತ್ತು ತಿರುಗಾಟಗಳು' ಎಂಬ ಕೃತಿಯನ್ನೂ ಹೊರತಂದಿದ್ದರು.ಅವರು ಸ್ತ್ರೀ ಪಾತ್ರ, ಪುರುಷ ಪಾತ್ರ ಹಾಗೂ ಹಾಸ್ಯ ಪಾತ್ರಗಳನ್ನೂ ಒಳಗೊಂಡಂತೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವಲ್ಲಿ ನಿಪುಣರಾಗಿದ್ದರು.

ಗದಾಯುದ್ಧದ ಕೌರವನ ಪಾತ್ರದಲ್ಲಿ ಅವರ ಅಭಿನಯ ಚಾತುರ್ಯ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮೈಲಿಗಲ್ಲಾಗಿ ಉಳಿದಿದೆ. ಯಕ್ಷಲೋಕದ ದಿಗ್ಗಜನ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article