-->
 ಉಡುಪಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ (Video)

ಉಡುಪಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ (Video)


ಉಡುಪಿ ನಗರದ ಬನ್ನಂಜೆ ಡಾ. ವಿ.ಎಸ್. ಆಚಾರ್ಯ ಸರಕಾರಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು ಐದು ವರ್ಷ ಪ್ರಾಯದ ಹೆಣ್ಣು ಮಗುವನ್ನು ರಕ್ಷಿಸಲಾಗಿದೆ. 

ಮಗುವನ್ನು ದೊಡ್ಡಣಗುಡ್ಡೆಯ ಮಕ್ಕಳ ಕಲ್ಯಾಣ ಸಮಿತಿ ಕಚೇರಿಗೆ ಹಾಜರು ಪಡಿಸಿ, ಬಳಿಕ ಸಮಿತಿಯ ಆದೇಶಾನುಸಾರ ಲಕ್ಷ್ಮೀ ನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವಿಗೆ ಪುರ್ನವಸತಿ ಕಲ್ಪಿಸಲಾಗಿದೆ.

ಬನ್ನಂಜೆ ಬಸ್ಸು ನಿಲ್ದಾಣದಲ್ಲಿ ಮಗು ಅನಾಥ ಸ್ಥಿತಿಯಲ್ಲಿರುವ ಬಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಅಕ್ಕಪಡೆಗೆ, ಸಾರ್ವಜನಿಕರು ಮಾಹಿತಿ ನೀಡಿದ್ದರು. ಬಳಿಕ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಕಾರ್ಯಚರಣೆ ನಡೆಸಿದ್ದಾರೆ. ಕಾರ್ಯಚರಣೆಯಲ್ಲಿ ಅಕ್ಕಾ ಪಡೆಯ ರಕ್ಷಿತಾ, ವನಿತಾ, 112 ತುರ್ತು ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ವಿದ್ಯಾಶ್ರೀ ಭಾಗವಹಿಸಿದ್ದರು

ಮಗುವಿನ ತಾಯಿ ಗದಗ ಮೂಲವರಾಗಿದ್ದು, ಪತಿ ಮೃತಪಟ್ಟಿರುವುದರಿಂದ ಜೀವನ ಸಾಗಿಸಲೆಂದು ತಾಯಿ ಮಗುವಿನೊಂದಿಗೆ ಉಡುಪಿಗೆ ವಲಸೆ ಬಂದಿದ್ದರು. ಜೀವನ ನಿರ್ವಹಣೆಗೆ ಕೆಲಸ ಸಿಕ್ಕರೂ ವಸತಿಗೆ ಸ್ಥಳ ಇಲ್ಲದೆ ಬಸ್ ನಿಲ್ದಾಣದಲ್ಲಿ ಕಾಲ ಕಳೆಯಬೇಕಾದ ಅಸಹಾಯಕ ಸ್ಥಿತಿ ತಾಯಿ ಮಗುವಿಗೆ ಎದುರಾಗಿತ್ತು. ಹೀಗಾಗಿ ಮಗುವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದು, ಇಲಾಖೆಯ ಸಮಯಪ್ರಜ್ಞೆಯಿಂದ ತಾಯಿ ಮಗು ರಕ್ಷಿಸಲಾಗಿದೆ.  




Ads on article

Advertise in articles 1

advertising articles 2

Advertise under the article